Kundapra.com ಕುಂದಾಪ್ರ ಡಾಟ್ ಕಾಂ

ಈಜಲು ತೆರಳಿದ್ದ ಅಕ್ಕ ಪಕ್ಕದ ಮನೆಯ ಯುವಕರಿಬ್ಬರ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿಗೆ ಸಮೀಪದ ಶಿರೂರು ಕೋಣಮಕ್ಕಿ ಸೇತುವೆ ಬಳಿ ಕುಟುಂಬ ಸದಸ್ಯರ ಜೊತೆ ಪಿಕ್‌ನಿಕ್ ಬಂದ ವೇಳೆ ನದಿಯಲ್ಲಿ ಈಜಲು ತೆರಳಿದ್ದ ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಭಟ್ಕಳದ ರಾಜು(28) ಹಾಗೂ ಜಮೀರ್ (22) ಮೃತ ದುರ್ದೈವಿಗಳು.

ಸೇತುವೆ ಬಳಿ ರಾಜು ನದಿಯಲ್ಲಿ ಈಜುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ಇದನ್ನು ಗಮನಿಸಿ ಅವರನ್ನು ರಕ್ಷಿಸಲು ತೆರಳಿದ ಜಮೀರ್ ಕೂಡ ಈಜಲಾಗದೆ ನೀರು ಪಾಲಾದರು. ಅಕ್ಕಪಕ್ಕದ ಮನೆಯ ಒಟ್ಟು ಎಂಟು ಮಂದಿ ಬಂದಿದ್ದರೆನ್ನಲಾಗಿದೆ. ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Exit mobile version