Site icon Kundapra.com ಕುಂದಾಪ್ರ ಡಾಟ್ ಕಾಂ

ಪ್ರಸನ್ನ ಆಂಜನೇಯ ದೇವಸ್ಥಾನದ 11ನೇ ವಾರ್ಷಿಕೋತ್ಸವ

ಕುಂದಾಪುರ: ಹಂಗಳೂರು ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ 11ನೇ ವಾರ್ಷಿಕೋತ್ಸವ ಸಮಾರಂಭ  ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ  ಮಂಗಳವಾರ ಜರಗಿತು.

ಜಿ.ಪಂ. ಮಾಜಿ ಉಪಾಧ್ಯಕ್ಷ  ರಾಜು ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ದೇವಸ್ಥಾನದ ಸ್ತಾಪಕ ಮುಂಬೈ ಉದ್ಯಮಿ ಸುರೇಶ್‌ ಡಿ.ಪಡುಕೋಣೆ  ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ  ತಾಲೂಕು ಪಂಚಾಯತ್‌ ಸದಸ್ಯ ಮಂಜು ಬಿಲ್ಲವ, ವಿದ್ಯುತ್‌ ಗುತ್ತಿಗೆದಾರರ  ಕೆ.ಆರ್‌.ನಾಯ್ಕ, ಪ್ರಕಾಶ್‌ ಪಡಿಯಾರ್‌, ಕುಂದಾಪುರ ದೇವಾಡಿಗರ ಸಂಘದ ಅಧ್ಯಕ್ಷ  ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.

ನಿವೃತ್ತ ಉಪನ್ಯಾಸಕ ಎಸ್‌.ಜನಾರ್ದನ್‌ ಮರವಂತೆ,  ವಸಂತ ಕುಮಾರಿ, ಸಮಾಜ ಸೇವಕ ಕೇಶವ ಕೋಟೇಶ್ವರ, ಪ್ರಮೀಳಾ ವಾಜ್‌, ಕಾರ್ಪೋರೇಶನ್‌ ಬ್ಯಾಂಕಿನ ಮಹಾಲಿಂಗ ದೇವಾಡಿಗ, ರಾಷ್ಟ್ರೀಯ ವೈಟ್‌ ಲಿಫ್ಟರ್‌  ಜಾಕ್ಸ್‌ನ್‌ ಅವರನ್ನು ಸಮ್ಮಾನಿಸಲಾಯಿತು.

ನಾರಾಯಣ ದೇವಾಡಿಗ ಸ್ವಾಗತಿಸಿದರು. ಸತೀಶ್‌ ಖಾರ್ವಿ ಕ್ರೀಡಾಕೂಟದ ವಿಜೇತರ ಪಟ್ಟಿ  ವಾಚಿಸಿದರು. ಗುರುರಾಜ ಗಾಣಿಗ ಹಂಗಳೂರು ಕಾರ್ಯಕ್ರಮ ನಿರ್ವಹಿ ಸಿದರು. ನಾಗರಾಜ ರಾಯಪ್ಪನಮಠ ವಂದಿಸಿದರು.

Exit mobile version