Kundapra.com ಕುಂದಾಪ್ರ ಡಾಟ್ ಕಾಂ

ಧರ್ಮದ ತಳಹದಿಯಲ್ಲಿ ಸಂಸ್ಕೃತಿ ಸುಭದ್ರ: ಅಪ್ಪಣ್ಣ ಹೆಗ್ಡೆ

ಕುಂದಾಪುರ: ಜಗತ್ತಿನ ಹಲವು ಸಂಸ್ಕೃತಿಗಳು ನಾಶವಾದರೂ ಭಾರತೀಯ ಸಂಸ್ಕೃತಿ ನಿರಂತರವಾಗಿ ಉಳಿದು ಬೆಳೆದಿದೆ. ಭಾರತೀಯ ಸಂಸ್ಕೃತಿಗೆ ಸನಾತನ ಧರ್ಮದ ತಳಹದಿ ಇರುವುದರಿಂದಲೇ ಅದು ಸುಭದ್ರವಾಗಿ ಉಳಿದಿದೆ ಎಂದು ಬಸೂÅರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅವರು ಹೇಳಿದರು.

ಇಡೂರಿನ ಪುರಾಣಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವರ ನವೀಕೃತ ಶಿಲಾದೇಗುಲ ಸಮರ್ಪಣೆ, ಶ್ರೀ ಮಹಾಲಿಂಗೇಶ್ವರ ಮತ್ತು ಪರಿವಾರ ದೇವರುಗಳ ಬಿಂಬ ಪುನಃ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭದ ಅಂಗವಾಗಿ ಮೇ 21ರಂದು ಜರಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆತ್ಮನಿವೇದನೆಯೇ ಭಗವಂತನಿಗೆ ಸಲ್ಲಿಸುವ ಅರ್ಥಪೂರ್ಣವಾದ ಪ್ರಾರ್ಥನೆ. ಏಕಾಗ್ರತೆ, ಬದ್ಧತೆ, ನಿರ್ಲಿಪ್ತತೆಯ ಪ್ರಾರ್ಥನೆಯಿಂದ ದೇವರ ಅನುಗ್ರಹ ಲಭಿಸುತ್ತದೆ. ಧಾರ್ಮಿಕ ಶ್ರದ್ಧೆಯಿಂದ ಕೂಡಿದ ಸುಸ್ಥಿರ, ಸ್ವಸ್ಥ ಹಾಗೂ ಪರಿಪೂರ್ಣ ಸಮಾಜ ನಿರ್ಮಾಣ ಎಲ್ಲರ ಗುರಿಯಾಗಬೇಕು ಎಂದರು.

ಮುಖ್ಯ ಅತಿಥಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಜಗತ್ತಿನ ಎಲ್ಲಾ ಧರ್ಮಗಳಿಗಿಂತ ಹೆಚ್ಚು ಉದಾತ್ತ ವಿಚಾರಗಳನ್ನು ಬೋಧಿಸುವ ಹಿಂದೂ ಧರ್ಮವು ಅಷ್ಟೇ ನಿರಾಸಕ್ತರನ್ನೂ ಹೊಂದಿದೆ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಗಮನದಲ್ಲಿರಿಸಿ ಪ್ರತಿಯೊಬ್ಬರೂ ಭಾರತೀಯ ಸನಾತನ ಧರ್ಮದ ಉದಾತ್ತ ಚಿಂತನೆಗಳನ್ನು ಅರ್ಥವಿಸಿ ಬದುಕಿನಲ್ಲಿ ಅಳವಡಿಸಿಕೊಂಡು ಹಿಂದೂ ಧರ್ಮ ಜಾಗೃತಿಗೆ ಶ್ರಮಿಸಬೇಕು. ದೇವಾಲಯಗಳ ಜೀರ್ಣೋದ್ಧಾರ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಿಕೆಯಿಂದ ಜಾಗƒತಿ ಸಾಧ್ಯ ಎಂದರು.

ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧನಂಜಯ ಶೆಟ್ಟಿ, ಜಿಲ್ಲಾ ಪಂಚಾಯತ್‌ ಸದಸ್ಯೆ ಇಂದಿರಾ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾದಿಕಾರಿ ಅಮರಪ್ರಸಾದ ಶೆಟ್ಟಿ, ಕೆನರಾ ಬ್ಯಾಂಕ್‌ ಎಜಿಎಂ ಐ. ಚಂದ್ರಶೇಖರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌. ಗೋಪಾಲ ಶೆಟ್ಟಿ ಅರ್ಚಕ ವೇ.ಮೂ. ಸೀತಾರಾಮ ಅಡಿಗ, ಅನುವಂಶೀಯ ಆಡಳಿತ ಮೊಕ್ತೇಸರ ಸುಬ್ರಾಯ ಭಟ್‌ ಗೋತೆ, ಐ. ಉಮೇಶ್‌ ಅಡಿಗ, ಕೆ. ನಾರಾಯಣ ಶೆಟ್ಟಿ, ಐ. ಗೋವರ್ಧನ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡಿದ ದಾನಿಗಳಾದ ಉದ್ಯಮಿ ಸುರೇಂದ್ರ ಶೆಟ್ಟಿ ಕೊಲ್ಲೂರು, ರಾಜಾರಾಮ ಐತಾಳ ಇಡೂರು, ಚಂದ್ರಶೇಖರ ಶೆಟ್ಟಿ ಕೈಲಾಡಿ, ಕೊಳ್ತ ನಾರಾಯಣ ಶೆಟ್ಟಿ, ಶಾಂತಾ ರಾಮಕೃಷ್ಣ ಅಡಿಗ, ರಾಮ ಹೊಸೂರು, ಉದ್ಯಮಿ ಶೇಖರ ಶೆಟ್ಟಿ, ಕರಿಯ ಪೂಜಾರಿ ಮುತ್ತಕೊಡ್ಲು, ಗುಲಾಬಿ ರಾಮಣ್ಣ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ ಇಡೂರು ಮೊದಲಾದವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ನ್ಯಾಯವಾದಿ ಕೆ. ಬಾಲಕೃಷ್ಣ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿಶೋರ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಿಗದ್ದೆ ನಾರಾಯಣ ಶೆಟ್ಟಿ ಅವರು ವಂದಿಸಿದರು.

Exit mobile version