ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಶಿರೂರು ವತಿಯಿಂದ ವಿಶ್ವದೀಪ ಕಲಾ ಸಂಸ್ಥೆಯ ಸಭಾಭವನದಲ್ಲಿ ಜೆಸಿಐ ಶಿರೂರು ಸಪ್ತ ಸ್ವರಗಳು ಪರಿಸರ ಸ್ನೇಹಿ ಜೆಸಿಐ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೊದಲ ಕಾರ್ಯಕ್ರಮವಾಗಿ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು, ದೀಪ ಬೆಳಗುವುದರ ಮೂಲಕ ವಿಶ್ವದೀಪ ಕಲಾ ಸಂಸ್ಥೆಯ ಮುಖ್ಯಸ್ಥರಾದ ಹನುಮಂತ ನಾಯ್ಕ ಚಾಲನೆ ನೀಡಿದರು. ಶಿರೂರು ಜೆಸಿಐ ಅಧ್ಯಕ್ಷರಾದ ಪಾಂಡುರಂಗ ಅಳ್ವೆಗದ್ದೆ ಅಧ್ಯಕ್ಷತೆ ವಹಿಸಿ ಯೋಗ ಶಿಬಿರದ ಮಹತ್ವ, ದಿನನಿತ್ಯದ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಇದರ ಮಹತ್ವದ ಕುರಿತು ಸವಿವರವಾದ ಮಾಹಿತಿ ನೀಡಿ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಆರೋಗ್ಯವಂತರಾಗಿ ಎಂದು ಕರೆ ನೀಡಿದರು. ಸುರೇಶ ಮಾಕೋಡಿ ವಿನೋದ ಮೇಸ್ತ, ನಾಗೇಂದ್ರ ಪ್ರಭು ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದರು. ಕೃಷ್ಣ ಪೂಜಾರಿ ಸ್ವಾಗತಿಸಿದರು. ಹರೀಶ ಗವಾಳಿ ವಂದಿಸಿದರು.