ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಶಿರೂರು ಇದರ ಸಾತ್ ಸುರ್ ಪರಿಸರ ಸ್ನೇಹಿ ಜೆಸಿಐ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸರಕೊಡಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಾರಂಗ ಯೂಸೂಫ್ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೆಸಿಐ ಶಿರೂರು ಇದರ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆಯವರು ಮಾತನಾಡಿ, ಸಾರಂಗ ಯೂಸೂಫ್ ರವರು ಆದರ್ಶ ಶಿಕ್ಷಕರಾಗಿ ಜನಾನುರಾಗಿಯಾಗಿ ಬಹುಮುಖ ಪ್ರತಿಭಾ ಸಂಪನ್ನರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದವರು, ಇಂತಹ ಸರಳ ವ್ಯಕ್ತಿತ್ವದ ಆದರ್ಶ ಶಿಕ್ಷಕರನ್ನು ಗುರುತಿಸುವುದರಿಂದ ಅವರ ಮಾರ್ಗದರ್ಶನ ಎಲ್ಲರಿಗೂ ದೊರೆಯುವಂತೆ ಆಗುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಭಾರತೀಯ ಭೂ ಸೈನ್ಯದ ಸೈನಿಕ ಉಮೇಶ ಶೆಟ್ಟಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು. ಮೋಹನ ರೇವಣ್ಕರ್, ಪ್ರಸಾದ ಪ್ರಭು , ಹರೀಶ ಶೇಟ್, ಗಿರೀಶ ಮೇಸ್ತ, ಪ್ರಕಾಶ ಮಾಕೋಡಿ, ನಾಗೇಶ ಕೆ, ನಾಗೇಂದ್ರ ಪ್ರಭು, ವಿನೋದ ಮೇಸ್ತ, ರಮೇಶ ನಾಯ್ಕ, ಹಾಲೇಶ ಇತರರು ಉಪಸ್ಥಿತರಿದ್ದರು. ನಾಗೇಶ ಕೆ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಮಾಕೋಡಿ ವಂದಿಸಿದರು.