ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಯಾಣಿಕರ ಕೊರತೆಯ ಕಾರಣ ರದ್ದಾಗಿರುವ ಕಾಸರಗೋಡು-ಕಣ್ಣೂರು-ಬೈಂದೂರು ಮೂಕಾಂಬಿಕಾ ರೋಡ್ ರೈಲನ್ನು ಸೂಕ್ತ ಮಾರ್ಪಾಡಿನೊಂದಿಗೆ ಪುನರಾರಂಭಿಸಬೇಕು ಎಂದು ರಾಷ್ಟ್ರೀಯ ರೈಲು ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯ ಕೆ. ವೆಂಕಟೇಶ ಕಿಣಿ ಬೈಂದೂರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ರೈಲಿನ ವೈಫಲ್ಯದ ಇನ್ನೊಂದು ಕಾರಣ ಕಣ್ಣೂರು ಮತ್ತು ಬೈಂದೂರು ನಿಲ್ದಾಣಗಳಲ್ಲಿನ ಅದರ ನಿರ್ಗಮನ ಸಮಯ ಜನರಿಗೆ ಅನುಕೂಲವಾಗಿಲ್ಲ. ಈ ಎರಡು ತೊಡಕುಗಳನ್ನು ನಿವಾರಿಸಿದರೆ ಈ ರೈಲು ಜನಪ್ರಿಯವಾಗುವುದು ಖಚಿತ.
ಕಣ್ಣೂರು-ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಸೆಂಟ್ರಲ್-ಕುಮಟಾ ನಡುವೆ ತೀವ್ರ ಪ್ರಯಾಣಿಕ ದಟ್ಟಣೆ ಇದೆ. ಈ ರೈಲನ್ನು ಕುಮಟಾ ತನಕ ವಿಸ್ತರಿಸಿದರೆ ಜನರಿಗೆ ತುಂಬ ಅನುಕೂಲ ಆಗಲಿದೆ. ಹಾಗೆಯೇ ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ನಡುವೆ ಪ್ಯಾಸೆಂಜರ್ ರೈಲು ಬೇಕು ಎನ್ನುವ ಆಗ್ರಹವೂ ಇದೆ.
ಕಣ್ಣೂರು-ಮಂಗಳೂರು ಸೆಂಟ್ರಲ್-ಬೈಂದೂರು ಮೂಕಾಂಬಿಕಾ ರೋಡ್-ಕುಮಟಾ ಪ್ಯಾಸೆಂಜರ್ ರೈಲು ಮುಂದಿನ ವೇಳಪಟ್ಟಿ ಅನುಸರಿಸಬಹುದು. ಕಣ್ಣೂರಿನಿಂದ 6 ಗಂಟೆಗೆ ನಿರ್ಗಮನ, 9.20ಕ್ಕೆಮಂಗಳೂರು ಸೆಂಟ್ರಲ್‌ಗೆ ಆಗಮನ, 9.40ಕ್ಕೆ ನಿರ್ಗಮನ. 12.40ಕ್ಕೆ ಬೈಂದೂರಿಗೆ ಆಗಮನ, 12.45ಕ್ಕೆ ನಿರ್ಗಮನ. 14.15ಕ್ಕೆ ಕುಮಟಾಗೆ ಆಗಮನ. 14.30ಕ್ಕೆ ಕುಮಟಾದಿಂದ ನಿರ್ಗಮನ. 15.55ಕ್ಕೆ ಬೈಂದೂರಿಗೆ ಆಗಮನ. 16.00ಕ್ಕೆ ನಿರ್ಗಮನ. 19.00ಕ್ಕೆ ಮಂಗಳೂರು ಸೆಂಟ್ರಲ್‌ಗೆ ಆಗಮನ, 19.10ಕ್ಕೆ ನಿರ್ಗಮನ. 22.35ಕ್ಕೆ ಕಣ್ಣೂರಿಗೆ ಆಗಮನ. ಕಿಣಿ ಈ ಸಲಹೆಯನ್ನು ತಮ್ಮ ಪತ್ರದಲ್ಲಿ ನೀಡಿದ್ದಾರೆ.