Kundapra.com ಕುಂದಾಪ್ರ ಡಾಟ್ ಕಾಂ

ಸ್ಮರಣೆ: ಶೂನ್ಯದಿಂದ ಎತ್ತರಕ್ಕೇರಿ ಬಾಂದಳದ ನಕ್ಷತ್ರನಾದ ಸುನಿಲ್ ಚಾತ್ರ

ಕೋಣಿ ರಮಾನಂದ ಕಾರಂತ್ | ಕುಂದಾಪ್ರ ಡಾಟ್ ಕಾಂ ಲೇಖನ.
ಇಂದಿಗೆ ಹದಿಮೂರು ವರುಷಗಳ ಹಿಂದಿನ ನೆನಪು. ಅಂದು ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಬಹುದೊಡ್ಡ ಕಾರ್ಯಕ್ರಮ. ನಾಗಮಂಡಲ, ಬ್ರಹ್ಮಕಲಶ, ಸ್ವಾಗತ ಗೋಪುರದ ಉದ್ಘಾಟನೆ ಇತ್ಯಾದಿ. ಅಂದಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಆಗಮಿಸುವ ಕಾರ್ಯಕ್ರಮ ಆದರೆ ಅಂದೇ ಕೊಅಲ್ಲೇ ನಮ್ಮೊಡನಿದ್ದ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರ ಮಗನಿಗೆ ಬೆಂಗಳೂರಿನಿಂದ ದೂರವಾಣಿ ಸಂದೇಶಗಳು ಬಂದು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬರುವುದು ಬಹುತೇಕ ಸಂಶಯ ಎಂಬ ಆಲೋಚನೆ ಬಂದಾಗತತ್ ಕ್ಷಣ ಅಲ್ಲಿದ್ದ ಇತರರನ್ನು ಒಗ್ಗೂಡಿಸಿಕೊಂಡು ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿದ್ದ ಬಹುದೊಡ್ಡ ಕಾರ್ಯಕ್ರಮಕ್ಕೆ ಆಗಮಿಸಲಿರುವ ಉಪ ಮುಖ್ಯಮಂತ್ರಿಗಳ ಭೇಟಿಗಾಗಿ ದೌಡಾಯಿಸಿದರು. ಅಂದಿನ ಆಹ್ವಾನ ಪತ್ರಿಕೆಯಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ನವರ ಹೆಸರೇ ಇರಲಿಲ್ಲ. ಆದರೂ ಈತನಿಗೆ ಅದೇನೋ ಆತ್ಮವಿಶ್ವಾಸ ಕಾರಿನಿಂದ ಇಳಿದವನೇ ನೇರ ಉಪ ಮುಖ್ಯಮಂತ್ರಿಗಳ ಬಳಿ ತೆರಳಿ ತಮ್ಮ ಕಾರ್ಯಕ್ರಮದ ಬಗ್ಗೆ ವಿಜ್ಞಾಪಿಸಿದರು. ಆ ಕ್ಷಣ ಉಪ ಮುಖ್ಯಮಂತ್ರಿಗಳು ಒಪ್ಪಿ ಕೆಲವೇ ಕ್ಷಣಗಳಲ್ಲಿ ಕಾರನ್ನು ಹತ್ತಿತಮ್ಮೊಡನೆ ಈತನನ್ನು ಕೂರಿಸಿಕೊಂಡು ಅಲ್ಲಿಂದ ಕಮಲಶಿಲೆಗೆ ಹೊರಟು ಬಂದು ಕಾರ್ಯಕ್ರಮ ನೆರವೇರಿಸಿದರು.

ಅಂದು ಅಲ್ಲಿ ನೆರೆದಿದ್ದ ಸುಮಾರು 15 ಸಾವಿರದಷ್ಟು ಜನರಿಗೆ ಈ ಯುವಕನ ಸಾಮರ್ಥ್ಯದ ನೈಜ ಪರಿಚಯವಾಗಿತ್ತು. ಆ ವ್ಯಕ್ತಿ ಬೇರಾರು ಅಲ್ಲ. ಶ್ರೀ ಕ್ಷೇತ್ರ ಕಮಲಶಿಲೆ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಸಚ್ಚಿದಾನಂದಚಾತ್ರ ಅವರಎರಡನೇ ಪುತ್ರ ದಿ. ಸುನೀಲ್ ಚಾತ್ರ.

ಸುನೀಲ್ ಚಾತ್ರರು ಸೆ.14 ರಂದು ಮಧ್ಯಾಹ್ನ ಸುಮಾರು ಮೂರುಘಂಟೆಗೆ ತಮಿಳುನಾಡಿನ ಕರೂರಿನ ಸಮೀಪ ರಸ್ತೆ ಅಪಘಾತದಲ್ಲಿ ನಿಧನರಾದರು. ಅತೀಕಡಿಮೆ ಪ್ರಾಯದಲ್ಲಿ ಮನುಷ್ಯಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನೈಜ ಉದಾಹರಣೆ ನಿಂತಿದ್ದರು. ಅವರ ಪ್ರಾಯ ಕೇವಲ 41 ವರುಷ. ನೆನಪಿರಲಿ ಕುಂದಾಪುರದ ಕೋಮಾ ಕಾರಂತರೂ ಸಹಾ ಸಾಧನೆಗಳ ಮಹಾಪೂರವನ್ನೇ ಜಯಿಸಿ ಇಹಲೋಕ ವನ್ನು ತ್ಯಜಿಸಿದ್ದು 41 ನೇ ಪ್ರಾಯದಲ್ಲೇ. ಕುಂದಾಪ್ರ ಡಾಟ್ ಕಾಂ ಲೇಖನ.

ದಿ. ಸುನೀಲ್ ಚಾತ್ರ ಜನಿಸಿದ್ದು ಹಳ್ಳಿಹೊಳೆ ಗ್ರಾಮದಲ್ಲಿ ಅಲ್ಲೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಹೈಸ್ಕೂಲು ಶಿಕ್ಷಣವನ್ನು ಸೈಂಟ್ ಮೇರಿಸ್ ಹಾಗೂ ಪಿ.ಯು.ಸಿಯನ್ನು ಭಂಡಾರ್ಕಾರ್ಸ್‌ನಲ್ಲಿ ಮುಗಿಸಿ ಅಟೋ ಮೊಬೈಲ್‌ನಲ್ಲಿ ಇಂಜಿನಿಯರಿಂಗ್‌ ಕೋರ್ಸ್‌ನ್ನು ಚಿತ್ರದುರ್ಗದಲ್ಲಿ ಮುಗಿಸಿ ಕುಂದಾಪುರಕ್ಕೆ ಆಗಮಿಸುವ ಸಮಯದಲ್ಲಿ ತಂದೆಯ ಶ್ರೀ ದುರ್ಗಾಂಬಾ ಸಂಸ್ಥೆಯು ಹಲವಾರು ಸವಾಲುಗಳೊಂದಿಗೆ ಸ್ವಾಗತಿಸಿತು.  ಸುನಿಲ್ ಚಾತ್ರ ಅದೆಲ್ಲವನ್ನೂಧನಾತ್ಮಕವಾಗಿ ಸ್ವೀಕರಿಸಿ ಹೊಸ ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದರು.

ಕುಂದಾಪುರದಿಂದ ಬೆಂಗಳೂರಿಗೆ ರಾಜ್ಯದಲ್ಲೇ ಮೊತ್ತ ಮೊದಲ ಬಾರಿ ಸ್ಲೀಪರ್ ಕೋಚ್ ಬಸ್ಸನ್ನು ಮಾರುಕಟ್ಟೆಗೆ ತಂದು ಯಶಸ್ವಿಗೊಳಿಸಿ ಇಂದು ಎಲ್ಲರೂ ಸ್ಲೀಪರ್ ಕೋಚ್ ಬಸ್ಸುಗಳ ವ್ಯವಹಾರವನ್ನು ನಡೆಸಲು ಸುನೀಲ್ ಸ್ಪೂರ್ತಿಯಾದರು. ತನ್ನ ಸಂಸ್ಥೆ ಕಷ್ಟ ಕಾಲದಲ್ಲಿದ್ದಾಗ ಹೊಸ ಹೊಸ ಬದಲಿ ವ್ಯವಹಾರಗಳನ್ನು ಯಾವ ರೀತಿಯಲ್ಲಿ ಜಾರಿಗೆ ತರಬಹುದು ಎಂಬ ಆಲೋಚನೆ ಸದಾ ಇವರ ತಲೆಯಲ್ಲಿ ಹೊಯ್ದಾಡುತ್ತಿತ್ತು. ಅದಕ್ಕೆ ಸರಿಯಾಗಿ ಇವರ ವಾಕ್‌ಚಾತುರ್ಯಕ್ಕೋ ಅಥವಾ ಇವರ ಸ್ನೇಹ ಶೀಲ ವ್ಯಕ್ತಿತ್ವಕ್ಕೋ ಸರಕಾರದ ವಿವಿಧ ಪ್ರಮುಖರ ಸಂಪರ್ಕ ಸಾಧಿಸಿದ್ದರು. ಇವರು ಸದಾ ಸರಕಾರದ ಯಾವ ಯಾವ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಅದನ್ನು ತಾನು ನಡೆಸಿದರೆ ಸರಕಾರ ಸಹಕಾರ ಸಿಗುವುದೇ ಎಂಬಿತ್ಯಾದಿ ವಿಚಾರಗಳನ್ನು ಯೋಜಿಸಿದ್ದರು. ಅದರ ಮೊದಲ ರೂಪ ಪಡೆದಿದ್ದೇ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವ್ಯವಸ್ಥೆ ಬೇಂದ್ರೆ ಸಾರಿಗೆ. ಇಂದು ಹುಬ್ಬಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಬೇಂದ್ರೆ ಸಾರಿಗೆ ವ್ಯವಸ್ಥೆಗೆ ಅಡಿಪಾಯ ಹಾಕಿದವರೇ ದಿ.ಸುನೀಲ್‌ಚಾತ್ರ. ಸಾರಿಗೆ ಕ್ಷೇತ್ರದಲ್ಲಿ ಅತಿಯಾದ ಸ್ಪರ್ಧೆ ಇದ್ದಲ್ಲಿ ಯಾರೂ ಸುಖವಾಗಿರಲು ಅಸಾಧ್ಯ. ನಾವೆಲ್ಲ ಒಟ್ಟು ಸೇರಿ ಬೇಂದ್ರೆ ಎಂಬ ಒಂದೇ ಕಂಪೆನಿ ಹೆಸರಿನಲ್ಲಿ ಬಸ್ಸುಗಳನ್ನು ಹಾಕೋಣ ಎಂದು ಹತ್ತು ಹಲವು ಬಸ್ಸುಗಳ ಮಾಲೀಕರನ್ನು ಒಟ್ಟು ಸೇರಿಸಿ ಸಂಸ್ಥೆ ಸ್ಥಾಪಿಸಿದರು.

ಬಳಿಕ ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್ ಸಿಂಘ್ ಬಾದಲ್ ಹಾಗೂ ಛತ್ತೀಸ್‌ಘಡದ ಮುಖ್ಯಮಂತ್ರಿ ರಮಣ ಸಿಂಘ್ ಸಂಪರ್ಕಕ್ಕೆ ಬಂದರು. ಆ ಸಂದರ್ಭ ನಗರ ಸಾರಿಗೆಯ ಕಲ್ಪನೆಯೇ ಗೊತ್ತಿರದ ಆ ಭಾಗಗಳಿಗೆ ಅವಿಭಾಜಿತದಕ್ಷಿಣಕನ್ನಡದ ಖಾಸಗಿ ಬಸ್ಸುಗಳ ನಗರ ಸಾರಿಗೆಯ ಶಿಸ್ತುಬದ್ಧ ವ್ಯವಸ್ತೆಯ ಬಗ್ಗೆ ಸುಂದರಚಿತ್ರಣವನ್ನು ನೀಡಿದರು.ಇದರಿಂದ ಪ್ರಭಾವಿತರಾಗಿಛತ್ತೀಸ್‌ಘಡದರಾಜಧಾನಿ ರಾಯ್‌ಪುರ್‌ನಲ್ಲಿ ಆ ರಾಜ್ಯದಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ನಗರ ಸಾರಿಗೆ ವ್ಯವಸ್ಥೆಗೆ ದಿ. ಸುನೀಲ್‌ಚಾತ್ರಾಅವರಿಗೆ ನಾಂದಿ ಹಾಡಿದ್ದರು.ಸುನೀಲ್‌ಇಲ್ಲಿಂದ ಹಿಂತಿರುಗಿ ನೋಡಲೇಇಲ್ಲ ನಂತರ ನಯಾರಾಯ್‌ಪುರ, ಬಿಲಾಸ್‌ಪುರದಲ್ಲಿಯೂ ಶ್ರೀ ದುರ್ಗಾಂಬ ಸಂಸ್ಥೆಯ ಸಾರಿಗೆ ವ್ಯವಸ್ಥೆಯನ್ನು ಸ್ಥಾಪಿಸಿದರು.ಇದರ ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಘ್ ಚೌಹಾಣ್‌ಅವರೂ ಸಹ ಇವರ ಚಟುವಟಿಕೆಗಳಿಂದ ಪ್ರಭಾವಿತರಾಗಿ ಭೂಪಾಲ್‌ನಲ್ಲಿಇವರ ಸಾರಿಗೆ ಸೇವೆಗೆ ಅವಕಾಶವನ್ನು ನೀಡಿದರು.ಚಾತ್ರರುಎಲ್ಲಾ ರಾಜ್ಯಗಳಲ್ಲೂ ತನ್ನೊಡನೆ ಬೇಂದ್ರೆ ಸಾರಿಗೆಗೆ ಸಹಕಾರ ನೀಡಿದ ಖಾಸಾಗಿ ಬಸ್ ಮಾಲಿಕರನ್ನುಇಲ್ಲೂ ಸಹ ಪಾಲುದಾರರನ್ನಾಗಿಸಿ ಸಾಮೂಹಿಕವಾಗಿ ಒಗ್ಗಟ್ಟಾಗಿ ಹೋರಾಡಿದರೆಯಶಸ್ಸು ಸಿಗುತ್ತದೆ ಎಂಬುದಕ್ಕೆ ಜಗತ್ತಿಗೆ ಮಾದರಿಯಾದರು. ನಂತರ ಅವರು ತನ್ನ ಹುಟ್ಟೂರಿನಲ್ಲೂ ಸುಮಾರು ನಲವತ್ತು ಬಸ್ಸುಗಳನ್ನು ಖರೀದಿಸಿ ಹಾಗೂ ರಾಜ್ಯದ ಪ್ರತಿಷ್ಟಿತಗಜಾನನ ಸಾರಿಗೆ ಸಂಸ್ಥೆಯ ಶೇ.೮೦% ಪಾಲುದಾರಿಕೆಯನ್ನೂ ಖರೀದಿಸಿ ಆ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಸಂಚಾಲಕರಾದರು.ಇವರಲ್ಲಿ ಕೆಲವೊಮ್ಮೆ ನಾವು ಕೇಳಿದ್ದುಂಟು.ಅಲ್ಲ  ಸುನೀಲ ನಿನಗೆ ವಿಶ್ರಾಂತಿಯಾವಾಗ? ಆಗ ಈತನ ಉತ್ತರ ಎಂಥವರಿಗೂ ಮಾದರಿ! ಕೆಲಸ ಮಾಡುವುದೇ ವಿಶ್ರಾಂತಿ! ಈ ರೀತಿ ಮನಸ್ಸು ಹಾಗೂ ಎದೆಗಾರಿಕೆಇದ್ದರೆ ಮನುಷ್ಯಏನನ್ನಾದರೂ ಸಾಧಿಸಬಹುದು ಎಂಬುದಕ್ಕೆಅವರೇ ಜ್ವಲಂತ ನಿದರ್ಶನ. ಇಂದು ಅವರ ಸಂಸ್ಥೆಯಲ್ಲಿ ಎರಡು ಸಾವಿರದಷ್ಟು ಜನರು ಉದ್ಯೋಗ ನಡೆಸುತ್ತಿದ್ದಾರೆ ಎಂದರೆ ಕುಂದಾಪುರದವರಾದ ನಮಗೆ ನಮ್ಮದೇ ಈ ಯುವಕನ ಸಾಮರ್ಥ್ಯ ಹಾಗೂ ಸಾಧನೆ ಹೆಮ್ಮೆತರುವುದಿಲ್ಲವೇ? ಕುಂದಾಪ್ರ ಡಾಟ್ ಕಾಂ ಲೇಖನ.

ಎಷ್ಟೇ ಬಿಡುವಿಲ್ಲದ ಕೆಲಸವಿರಲಿ ಯಾವತ್ತೂ ಫೋನ್‌ಕಾಲ್ ಮಾಡಿದರೆಇವರ ಪ್ರತ್ಯುತ್ತರ ಇಲ್ಲದೇ ಇರುತ್ತಿರಲಿಲ್ಲ ಅಂಥಾ ಹೃದಯವಂಥ.ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂತನ್ನೂರಿಗೆ ಬಂದಾಗತೀರಅತಿ ಸಾಮಾನ್ಯನಂತೆತನ್ನ ಒಡನಾಡಿಗಳೊಂದಿಗೆ ಬೆರೆತುತಮಾಷೆ ಮಾಡುವುದಾಗಲೀ, ಕ್ರಿಕೆಟ್‌ಆಡುವುದಾ ಗಲೀ, ಸಣ್ಣ ಸಣ್ಣ ಹೋಟೆಲ್‌ಗಳಲ್ಲಿ ಅವರಿಗೆಗೊತ್ತಿರುವರುಚಿಯಾದ ತಿನಿಸುಗಳನ್ನು ತಿನ್ನಲು ಹೋಗುವುದಾಗಲಿ ತಪ್ಪಿಸುತ್ತಿರಲಿಲ್ಲ.

ಸಚ್ಚಿದಾನಂದ ಚಾತ್ರರ ಮನೆಯ ಬಗ್ಗೆ ಇಲ್ಲಿ ತಿಳಿಸಲೇಬೇಕು. ಶ್ರೀ ಕ್ಷೇತ್ರ ಕಮಲಶಿಲೆಯ ಯಾವುದೇಕಾರ್ಯಕ್ರಮ ವಿರಲಿ, ಜಾತ್ರೆ ಇರಲಿ ಎಷ್ಟೇ ಸಮಸ್ಯೆಇದ್ದರೂ ಪಕ್ಕಕ್ಕಿಟ್ಟುಅತೀ ಸಂತೋಷದಿಂದ ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು.ಒಮ್ಮೆ ಶ್ರೀ ಕ್ಷೇತ್ರದ ಸುತ್ತಿನ ದೇವರುಗಳ ಬ್ರಹ್ಮಕಲಶಕ್ಕೆ ಯಾರನ್ನುಕರೆಸಬೇಕುಎಂಬಿತ್ಯಾದಿ ಚರ್ಚೆ ನಡೆದಾಗ ದಿ.ಸುನೀಲ್ ಆಗ ಶ್ರೀ ರವಿಶಂಕ ಗುರೂಜಿಯವರನ್ನುಆಹ್ವಾನಿಸುವ ಜವಾಬ್ದಾರಿತನ್ನದೆಂದು ವಹಿಸಿಕೊಂಡು ಅವರನ್ನು ಕಮಲಶಿಲೆಗೆ ಕರೆಸಿ ಅವರಅಮೃತ ಹಸ್ತದಿಂದ ಆ ಕಾರ್ಯವನ್ನು ನಡೆಸಿ ಕೊಟ್ಟಿದ್ದುಇನ್ನೂ ನೆನಪು.

ಇಂದು ಮಿತ್ರ ದಿ. ಸುನೀಲ್ ಕೇವಲ ನೆನಪು ಆದರೆಇವರ ಸಾಧನೆಯುವಕರಿಗೆ ಮಾದರಿ. ಸಂಸ್ಥೆ ಕಡು ನಷ್ಟದಲ್ಲುಂಟೆಂದು ಹೆದರಿ ಓಡಿ ಹೋಗಿದ್ದರೆ ಈ ಸಾಧನೆಗಳಾವುದೂ ಬರುತ್ತಿರಲಿಲ್ಲ. ಮಿತ್ರರೇಇವರಿಂದ ನಾವು ಕಲಿಯಬೇಕಾದದ್ದುಏನೆಂದರೆ ಸಮಸ್ಯೆಗಳು ಬರುತ್ತವೆಆದರೆ ನಾವು ಸದಾ ಆ ಸಮಸ್ಯೆಯಿಂದ ಹೊರ ಬರುವುದು ಹೇಗೆಂದುಚಿಂತಿಸಬೇಕು ಹಾಗೂ ಅದನ್ನು ಕಾರ್ಯಗತಗೊಳಿಸಿದರೆ ಮಾತ್ರಯಶಸ್ಸು.ಜೀವನ ಸಾಗರದಲ್ಲಿಈಜಿದಡ ಸೇರ ಬೇಕೇ ವಿನಃ ಮುಳುಗಬಾರದು ಎಂಬ ಸಂದೇಶಯುವಜನತೆಗೆಕೊಟ್ಟು ಬಾಂದಳದ ಸದಾ ಮಿನುಗುವ ನಕ್ಷತ್ರನಾದ ನನ್ನಅತ್ಮೀಯ ಮಿತ್ರ ದಿ.ಸುನೀಲ್ ನಿನಗಿದೋ ನನ್ನ ಪದ ಪುಂಜಗಳ ಭಾಷ್ಫಾಂಜಲಿ. ಕುಂದಾಪ್ರ ಡಾಟ್ ಕಾಂ.

ಶ್ರೀ ಕ್ಷೇತ್ರದದೇವಿ ಶ್ರೀ ಬ್ರಾಹ್ಮಿದುರ್ಗಾಪರಮೇಶ್ವರಿಯುಇವರತಂದೆ ಸಚ್ಚಿದಾನಂದಚಾತ್ರರಿಗೂತಾಯಿಕಲಾವತಿಚಾತ್ರರಿಗೂ, ಅವರಧರ್ಮಪತ್ನಿ ಸೌಮ್ಯಚಾತ್ರರಿಗೂ, ಮಗಳು ಆಹನ ಹಾಗೂ ಸಹೋದರರಾದ ಅನಿಲ್ ಚಾತ್ರ ಮತ್ತು ಸುಪ್ರೀತ್‌ಚಾತ್ರರಿಗೂ ಸೋದರಿಅನಿತಾ ಸುರೇಶ್ ಶಾಸ್ತ್ರಿ ಮತ್ತು ಮನೆಯಎಲ್ಲಾ ಸದಸ್ಯರಿಗೂಇವರಅಗಲುವಿಕೆಯದುಃಖ ಸಹಿಸುವಂಥಾ ಶಕ್ತಿಯನ್ನುಕೊಡಲಿ ಎಂದು ಪ್ರಾರ್ಥಿಸುತ್ತೇವೆ.

 

ಓದಿ: ಶ್ರೀದುರ್ಗಾಂಬ ಮೋಟಾರ್ಸ್ ಮಾಲಕ ಸುನಿಲ್ ಚಾತ್ರ ರಸ್ತೆ ಅಪಘಾತದಲ್ಲಿ ಬಲಿ – https://kundapraa.com/?p=29834 .

Exit mobile version