Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ: ಮನೆಯೆದುರಿನ ಸಮುದ್ರದಲ್ಲಿ ಕೊಚ್ಚಿಹೋದ ತರುಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತನ್ನ ಮನೆಯೆದುರು ನಡೆಯುತ್ತಿದ್ದ ಮೀನುಗಾರಿಕೆಯನ್ನು ನೋಡುಲು ಸಮುದ್ರ ತೀರಕ್ಕೆ ತೆರಳಿದ್ದ ಮನೋಜ್ ಎಂಬ ಯುವಕನೋರ್ವ ಸಮುದ್ರದ ಅಲೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ. ತಾಲೂಕಿನ ಕೋಡಿಯ ನಿವಾಸಿ ಮನೋಜ ಪೂಜಾರಿ (18) ಮೃತ ದುರ್ದೈವಿ.

ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಮನೋಜ್ ಪೂಜಾರಿ ಕಾಲೇಜಿಗೆ ರಜೆ ಇದ್ದುದರಿಂದ ಸ್ನೇಹಿತರೊಂದಿಗೆ ತಮ್ಮ ಮನೆಯೆದುರೇ ಇದ್ದ ಸಮುದ್ರ ತೀರಕ್ಕೆ ತೆರಳಿದ್ದ. ಈ ಸಂದರ್ಭ ಸಮುದ್ರದ ರಕ್ಕಸದ ಅಲೆಯೊಂದಕ್ಕೆ ಸಿಲುಕಿ ಆತ ನಾಪತ್ತೆಯಾಗಿದ್ದ. ಕೂಡಲೇ ಅಲ್ಲಿದ್ದ ಮೀನುಗಾರರು ರಕ್ಷಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಆತ ಕೊಚ್ಚಿಹೋಗಿದ್ದ. ಭಾನುವಾರ ಸಂಜೆಯ ತನಕವೂ ಹುಡುಕಾಡ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಹಾಗೂ ಕುಂದಾಪುರ ಪೊಲೀಸರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದರು.

Exit mobile version