Kundapra.com ಕುಂದಾಪ್ರ ಡಾಟ್ ಕಾಂ

ವಿವೇಕಾನಂದರ ಭಾಷಣದಿಂದ ಭಾರತದ ಬಗೆಗಿನ ದೃಷ್ಠಿಕೋನ ಬದಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರು ನೀಡಿದ ನಾಲ್ಕು ನಿಮಿಷಗಳ ಉಪನ್ಯಾಸದಿಂದಾಗಿ ವಿಶ್ವಕ್ಕೆ ಭಾರತದ ಬಗೆಗಿನ ಅಭಿಪ್ರಾಯ ಹಾಗೂ ದೃಷ್ಟಿಕೋನ ಬದಲಾಗುವಂತಾಯಿತು. ಭಾರತದ ಪ್ರತಿ ಯುವಕನಲ್ಲಿಯೂ ಆತ್ಮವಿಶ್ವಾಸ ವೃದ್ಧಿಯಾಯಿತು. ಇದು ಸ್ವಾತಂತ್ರ್ಯ ಚಳುವಳಿಗೂ ಪ್ರೇರಣೆಯಾಗಿತ್ತು. ತನ್ನ ಮಾತಿನ ಮೂಲಕ ಅಂತಹ ಪ್ರಭಾವವನ್ನು ಬೀರಿದ್ದ ಸ್ವಾಮಿ ವಿವೇಕಾನಂದರ ಭಾಷಣವನ್ನು ಮತ್ತೊಮ್ಮೆ ಸ್ಮರಿಸುವ ಮೂಲಕ ಯುವಕರನ್ನು ಜಾಗೃತಿಗೊಳಿಸುವ ಕೆಲಸವಾಗುತ್ತಿದೆ ಎಂದು ಮಂಂಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಧರ್ಮವೃತ್ತಾನಂದ ಸ್ವಾಮೀಜಿ ಹೇಳಿದರು.

ಬೈಂದೂರು ಶಾರದಾ ವೇದಿಕೆಯಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಬೈಂದೂರು ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೫ವರ್ಷ ಸಂದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿವೇಕಾನಂದರು ಒಂದು ಧರ್ಮ, ದೇಶಕ್ಕೆ ಸೀಮಿತವಾದವರಲ್ಲ. ಅವರು ವಿಶ್ವ ಮಾನವರಾಗಿದ್ದವರು. ವಿವೇಕಾನಂದರ ಭಾಷಣದಿಂದಾಗಿ ವಿವಿಧ ಧರ್ಮಶಾಸ್ತ್ರಜ್ಞರಲ್ಲಿ ಹಿಂದೂ ಧರ್ಮ ಶ್ರೇಷ್ಠ ಧರ್ಮ ಎಂಬ ಭಾವನೆ ಮೊಳಕೆಯೊಡೆಯುವಂತಾಯಿತು. ಸ್ವಾಮೀಜಿಯವರ ಜೀವನತತ್ವವನ್ನು ಅಳವಡಿಸಿಕೊಂಡು ಮುನ್ನಡೆದಾಗ ಭಾರತತ ಅಭಿವೃದ್ಧಿ ಸಾಧ್ಯವಿದೆ ಎಂದರು.

ವಾಗ್ಮಿ ನಿತ್ಯಾನಂದ ವಿವೇಕವಂಶಿ ಮಾತನಾಡಿದರು. ಹಿರಿಯ ಸಾಮಾಜಿಕ ಕಾರ್ಯಕರ್ತ ಜನಾರ್ದನ ನಾಯ್ಕ್, ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ ಉಪಸ್ಥಿತರಿದ್ದರು.

ಯುವ ಬ್ರಿಗೇಡ್‌ನ ಅದೀಪ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸದರು. ಬೈಂದೂರು ಯಡ್ತರೆಗೆ ಶೋಭಾಯಾತ್ರೆಗೆ ಟಿ. ನಾರಾಯಣ ಹೆಗ್ಡೆ ಚಾಲನೆ ನೀಡಿದರು.

 

Exit mobile version