Kundapra.com ಕುಂದಾಪ್ರ ಡಾಟ್ ಕಾಂ

ಕುಶ ಪೂಜಾರಿ ಮರವಂತೆ ಈಗ ವಿಯೆಟ್‌ನಾಮ್‌ನಲ್ಲಿ ಯೋಗ ಶಿಕ್ಷಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯ ಯೋಗಪಟು ಕುಶ ಪೂಜಾರಿ ವಿಯೆಟ್‌ನಾಮ್‌ನ ಮಿಕೊ ಫಿಟ್‌ನೆಸ್ ಸೆಂಟರ್‌ನಲ್ಲಿ ಯೋಗ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಯೋಗ ವಿಜ್ಞಾನದಲ್ಲಿ ಎಮ್ ಎಸ್ಸಿ ಪದವಿ ಗಳಿಸಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮಲಯೇಷ್ಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಪಡೆದಿದ್ದರು.

ಮರವಂತೆಯ ರಾಮಚಂದ್ರ ಪೂಜಾರಿ-ನೀಲು ಪೂಜಾರಿಯ ಪುತ್ರರಾಗಿರುವ ಅವರು ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರವಂತೆ ಪ್ರೌಢಶಾಲೆ, ನಾವುಂದ ಪದವಿಪೂರ್ವ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದು, ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಎಂ. ಎ. ಲಮಾಣಿ, ಯಶೋದಾ ಕರನಿಂಗ, ಡಾ. ಕೆ. ಕೃಷ್ಣ ಶರ್ಮ ಅವರಿಗೆ ಯೋಗ ಕಲಿಸಿದ್ದರು,. ಬಿ.ಬಿ. ಹೆಗ್ಡೆ ಕಾಲೇಜಿನ ನಿರ್ದೇಶಕ ದೋಮ ಚಂದ್ರಶೇಖರ್ ನೀಡಿದ ಪ್ರೋತ್ಸಾಹದ ಫಲವಾಗಿ ವಿಶೇಷ ಸಾಧನೆ ಸಾಧ್ಯವಾಯಿತು ಎಂದಿದ್ದಾರೆ.

 

Exit mobile version