Kundapra.com ಕುಂದಾಪ್ರ ಡಾಟ್ ಕಾಂ

ಏಕತ್ವದಿಂದ ಸಹಿಷ್ಟುತೆಗೆ ಉಳಿಗಾಲವಿಲ್ಲ: ಡಾ. ಷ. ಶೆಟ್ಟರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಕನ್ನಡ ನಾಡಿನ ಸಂಸ್ಕೃತಿ ಹಿಂದಿನಿಂದಲೂ ಬಹೂತ್ವವನ್ನು ಪ್ರತಿಪಾದಿಸಿತ್ತು. ಸಂಸ್ಕೃತಿಯ ಬುನಾದಿಯೇ ವರ್ಣ ವಿಮುಕ್ತಿಯನ್ನು ಹೊಂದಿತ್ತು. ಆದರೆ ೧೨ನೇ ಶತಮಾನದ ನಂತರ ಧರ್ಮ ವೈಷಮ್ಯತೆ ಹೆಚ್ಚುತ್ತಾ, ಉಗ್ರಮತಿ ಬೆಳೆಯುತ್ತಾ ಸಹಿಷ್ಟುತೆಗೆ ಉಳಿಗಾಲವಿಲ್ಲ ಎಂಬ ಪರಿಸ್ಥಿತಿ ಬಂದಿದೆ ಎಂದು  ಸಂಶೋಧಕ ಡಾ. ಷ. ಶೆಟ್ಟರ್ ಹೇಳಿದರು.
ಅವರು ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೮ ೧೫ನೇ ಆವೃತ್ತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಯಾವಾಗಲೂ ಬಹುತ್ವದ ಪರಂಪರೆಯಿತ್ತು. ರಾಜ ವಿಷ್ಟುವರ್ಧನನ ಕುಟುಂಬವೇ ಇದಕ್ಕೊಂದು ನಿದರ್ಶನ. ಆತನ ಮಡದಿ ಬೇರೆ ಧರ್ಮವನ್ನು ಪಾಲಿಸಿದ್ದರೂ ಮದವೆಯ ಬಳಿಕ ಮತ ಬದಲಾವಣೆ ಆಗಿರಲಿಲ್ಲ. ಇಂತಿಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಕಾಣಸಿಗುತ್ತದೆ ಎಂದ ಅವರು ಇಂದು ಏಕತ್ವವನ್ನು ಕಾಣುವ ದಿನಗಳು ಬಂದಿವೆ. ಬರಹಗಾರ ಏನನ್ನು ಬರೆಯಬೇಕು ಏನನ್ನು ಬರೆಯಬಾರದು ಎಂಬುದನ್ನು ಸರಕಾರ ನಿರ್ಧರಿಸುವ ದಿನಗಳು ಬಂದಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಇತಿಹಾಸಕಾರರು ನಮ್ಮ ಪರಂಪರೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡಲು ಸಾಧ್ಯವಿದ್ದರೂ, ಅದನ್ನು ಅರಗಿಸಿಕೊಂಡಿಲ್ಲ. ಇತಿಹಾಸದ ಅಧ್ಯಯನದೊಂದಿಗೆ ಹೊಸ ಸಾಹಿತ್ಯ ಚರಿತ್ರೆಯನ್ನು ಸೃಷ್ಟಿಮಾಡಬೇಕಿದೆ ಎಂದರು.
Exit mobile version