Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ, ಬೈಂದೂರಿಗೆ ಸಾರಿಗೆ ಸಚಿವರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ರಾಜ್ಯ ಸರಕಾರದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪಿತ ಬಂದೂರು ಹೊಸ ಬಸ್ ನಿಲ್ದಾಣದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ರೂಪುರೇಷಗಳನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ರೈತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲವು ಮಾರ್ಪಾಡುಗಳ ಮೂಲಕ ಸಾರ್ವಜನಿಕರಿಗೆ ತಕ್ಕಂತೆ ಬಸ್ ನಿಲ್ದಾಣ ರೂಪಿಸಲಾಗುವುದು. ತಾಲೂಕು ಕೇಂದ್ರವಾದ ಕಾರಣ ಹಾಗೂ ಗ್ರಾಮೀಣ ಭಾಗಗಳು ಹೆಚ್ಚಿರುವುದರಿಂದ ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದ ಅವರು, ಸಂಸ್ಥೆಯಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ ಸೋರುವಿಕೆಯನ್ನು ತಡೆಗಟ್ಟಿ ಆದಾಯ ಹೆಚ್ಚಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದರು.

ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ವಿಭಾಗೀಯ ಸಂಚಲನ ಅಧಿಕಾರಿ ಜಯಶಾಂತ ಕುಮಾರ್, ವಿಭಾಗೀಯ ತಾಂತ್ರಿಕ ಶಿಲ್ಪಿ ವಿಲ್ಸ್‌ನ್ ಲೋಬೋ, ಇಂಜಿನೀಯರ್ ರಾಜಶೇಖರ್ ಗುಡಿಗಾರ್, ಸಿವಿಲ್ ಇಂಜಿನೀಯರ್ ಜಗದೀಶ್‌ಚಂದ್ರ, ಮುಖಂಡರಾದ ಮನ್ಸೂರ್ ಇಬ್ರಾಹಿಂ, ಇನಾಯಿತುಲ್ಲಾ ಶಾಬಂದ್ರಿ, ಹುಸೈನ್ ಹೈಕಾಡಿ, ಸಂದೇಶ ಭಟ್ ಉಪ್ಪುಂದ, ಬಿ. ಎಂ. ನಾಗರಾಜ ಗಾಣಿಗ ಬಂಕೇಶ್ವರ, ನಿತೀನ್ ಶೆಟ್ಟಿ ಬಂದೂರು ಮೊದಲಾದವರು ಇದ್ದರು.

Exit mobile version