ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಭಿನ್ನ ಐಡಿಯಾಸ್, ಕಾರ್ಟೂನು ಕುಂದಾಪ್ರ ಬಳಗದ ಆಶ್ರಯದಲ್ಲಿ ಇಲ್ಲಿನ ಕಲಾ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಕಾರ್ಟೂನು ಹಬ್ಬ 2018ಉದ್ಘಾಟನೆಗೊಂಡಿತು.
ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಕಾರ್ಟೂನು ಹಬ್ಬ ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಪೊಟೋ ಪತ್ರಕರ್ತ ಯಜ್ಞ ಮಂಗಳೂರು, ಪತ್ರಕರ್ತರಾದ ದಯಾಸಾಗರ್ ಚೌಟ, ಯು.ಕೆ.ಕುಮಾರನಾಥ್ ಮಾತನಾಡಿದರು.
ಕ್ರೀಡಾ ಪೊಟೋ ಪತ್ರಕರ್ತ ಸುರೇಶ್ ಕೆ. ಕರ್ಕೇರ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಪ್ರಕಾಶ್ ಶೇಟ್, ಜಯಂತ ಕಾಯ್ಕಿಣಿ ಅವರಿಗೆ ಸಂಗೀತ ನಮನ ಸಲ್ಲಿಸಿದರು.
ಗಿರಿಧರ ಕಾರ್ಕಳ, ಅವಿನಾಶ್ ಕಾಮತ್, ಸೋಮಶೇಖರ ಪಡುಕೆರೆ, ಶೇಖರ ಅಜೆಕಾರು, ಧನಂಜಯ ಗುರುಪುರ, ಕೇಶವ ಸಸಿಹಿತ್ಲು, ಸತೀಶ್ ಆಚಾರ್ಯಾ ಹಾಗೂ ಇನ್ನಿತರ ಕಲಾವಿದರ ಜತೆ ಅನೌಪಚಾರಿಕ ಸಮ್ಮಿಲನ ನಡೆಯಿತು.
ಕಾರ್ಟೂನು ಹಬ್ಬ ಆಯೋಜಕ ಸತೀಶ್ ಆಚಾರ್ಯ ಸ್ವಾಗತಿಸಿದರು. ಗಿರಿಧರ ಕಾರ್ಕಳ ಅತಿಥಿಗಳ ಪರಿಚಯಿಸಿದರು. ರಾಮಕೃಷ್ಣ ಹೇರ್ಳೆ ನಿರೂಪಿಸಿದರು.