Kundapra.com ಕುಂದಾಪ್ರ ಡಾಟ್ ಕಾಂ

ಸಂಘಟಿತರಾಗಿ ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತ: ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಬಂಟರ ಯಾನೆ ನಾಡವರ ಸಂಘದ ವತಿಯಿಂದ ನಿರ್ಮಾಣಗೊಂಡ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಂಡಾಡಿ ಜಗನ್ನಾಥ ಶೆಟ್ಟಿ ಸಭಾಂಗಣ, ಯಡ್ತರೆ ಮಂಜಯ್ಯ ಶೆಟ್ಟಿ ಅವರ ೧೦೫ನೇ ಜನ್ಮ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸಂಪತ್ತು ಗಳಿಕೆ ಜೀವನದ ಒಂದು ಭಾಗವೇ ಹೊರತು ಸಂಪತ್ತೇ ಜೀವನವಲ್ಲ. ಹಣದ ಹಿಂದೆ ಓಡುವುದಕ್ಕಿಂತ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ಭಗವಂತನಿಗೂ ಪ್ರಿಯವಾಗಿದ್ದು, ಸಂಘಟಿತರಾಗಿ ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತವಾಗಿರುತ್ತದೆ ಎಂದು ಹೇಳಿದರು.

ನಮ್ಮ ಬೆಳವಣೆಗೆಯಲ್ಲಿ ಸಮಾಜದ ಕೊಡುಗೆ ತುಂಬಾಯಿದ್ದು ಪ್ರತಿಯೊಬ್ಬರು ಅದನ್ನು ಮರೆಯಬಾರದು, ನಾವು ನಮ್ಮ ಸಮಾಜದೊಂದಿಗೆ ಬೇರೆ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋದಾಗ ಅವರ ಪ್ರೀತಿ, ವಿಶ್ವಾಸವನ್ನು ಗಳಿಸಬಹುದು. ಕರಾವಳಿ ಜಿಲ್ಲೆಯ ಬಂಟ ಸಮುದಾಯದ ಕೊಡುಗೆಯೂ ಅಪಾರವಾಗಿದ್ದು, ಸಮಾಜದಲ್ಲಿ ಇನ್ನೊಬ್ಬರ ಕಾಲೆಳೆಯುವುದಕ್ಕಿಂತ ಕೈಹಿಡಿದು ಮುನ್ನೆಡೆಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕು ಎಂದರು.

ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಕೀರ್ತಿಶೇಷ ಮಂಜಯ್ಯ ಶೆಟ್ಟಿಯವರು ಕೇವಲ ಬೈಂದೂರಿಗೆ ಮಾತ್ರ ಸೀಮಿತವಾಗಿಲ್ಲ, ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಗುರುತಿಸಿಕೊಂಡಿದ್ದರು ಎಂದರು.

ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಮತ್ತು ಬೈಂದೂರು ಬಂಟರ ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಐಎಫ್‌ಎಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದಾನಿಗಳನ್ನು, ಸಾಧಕರನ್ನು ಹಾಗೂ ಲೋಕಾಯುಕ್ತರನ್ನು ಸನ್ಮಾನಿಸಲಾಯಿತು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಎ. ಜಿ. ಕೊಡ್ಗಿ, ಕೆ. ಗೋಪಾಲ ಪೂಜಾರಿ, ಯುವ ಬಂಟರ ಸಂಘ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಯು. ಬಿ. ಶೆಟ್ಟಿ, ನೈಲಾಡಿ ಶಿವರಾಮ ಶೆಟ್ಟಿ, ಡಾ. ಸುಧಾಕರ ಹೆಗ್ಡೆ, ಪ್ರೊ. ಎಂ. ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ಡಾ. ವೈ. ಎಸ್. ಹೆಗ್ಡೆ ಕುಂದಾಪುರ, ಡಾ. ಎಂ. ಲಕ್ಷ್ಮೀನಾರಾಯಣ ಶೆಟ್ಟಿ ಮಂಗಳೂರು, ಯು. ಟಿ. ಆಳ್ವ ಮಂಗಳೂರು, ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ, ಎಸ್. ನಾರಾಯಣ ಶೆಟ್ಟಿ ಚುಚ್ಚಿ, ಕೆ. ವಿಠಲ್ ಶೆಟ್ಟಿ ಕಟ್‌ಬೆಲ್ತೂರು, ಜಗನ್ನಾಥ ಶೆಟ್ಟಿ ನಾಕಟ್ಟೆ, ಯು. ಸೀತಾರಾಮ ಶೆಟ್ಟಿ ಉಪ್ಪುಂದ, ಡಾ. ಯು. ಮಾಧವ ಶೆಟ್ಟಿ ಉಪ್ಪುಂದ, ಜಿ. ಗೋಕುಲ ಶೆಟ್ಟಿ ಉಪ್ಪುಂದ, ಎಚ್. ಜಯಶೀಲ ಶೆಟ್ಟಿ ಘಟಪ್ರಭ, ಜಗದೀಶ ಶೆಟ್ಟಿ ಕುದ್ರುಕೋಡು, ವಾದಿರಾಜ್ ಶೆಟ್ಟಿ ಉಪ್ಪುಂದ ಮತ್ತಿತರರು ಉಪಸ್ಥಿತರಿದ್ದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಸ್ವಾಗತಿಸಿ, ಎಚ್. ವಸಂತ ಹೆಗ್ಡೆ ಪ್ರಾಸ್ತಾವಿಸಿದರು. ಆರ್. ಜೆ. ನಯನಾ ಮತ್ತು ಯು. ಎಸ್. ಶೆಣೈ ನಿರೂಪಿಸಿದರು.

 

Exit mobile version