Site icon Kundapra.com ಕುಂದಾಪ್ರ ಡಾಟ್ ಕಾಂ

ಬಂಕೇಶ್ವರ ರಸ್ತೆ ರೈಲ್ವೆ ಅಂಡರ್ ಬ್ರೀಡ್ಜ್‌ಗೆ ತಾತ್ವಿಕ ಒಪ್ಪಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಬಂಕೇಶ್ವರ ರಸ್ತೆಯಲ್ಲಿರುವ ರೈಲ್ವೆ ಎಲ್‌ಸಿ ಗೇಟನ್ನು ಮುಚ್ಚಿ ಅಂಡರ್ ಬ್ರಿಡ್ಜ್ ನಿರ್ಮಿಸಲು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ ಗುಪ್ತಾ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಬೈಂದೂರಿಗೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ತಿಳಿಸಿದ್ದಾರೆ.

ರೈಲ್ವೆ ಅಂಡರ್ ಪಾಸ್‌ಗೆ ಸುಮಾರು ಒಂದು ಕೋಟಿ ರೂ. ಅಂದಾಜು ವೆಚ್ಚದ ತಗಲಲಿದ್ದು ಭಾಗಶಃ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ ಎಂದು ರಾಪ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಶಕ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಳ ಪರಿಶೀಲನೆ ವೇಳೆ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕೊಂಕಣ ರೈಲ್ವೆ ಇಂಜಿನೀಯರ್ ವೆಂಕಟೇಶ್ ಇದ್ದರು.

Exit mobile version