Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರೋಟರಿ ಸದಸ್ಯರಿಂದ ರಕ್ತದಾನ

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಪದಾಧಿಕಾರಿಗಳು ಮತ್ತು ಸದಸ್ಯರು ಇತ್ತೀಚೆಗೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಆರಂಭವಾಗಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ರಕ್ತನಿಧಿ ಘಟಕಕ್ಕೆ ಭೇಟಿಕೊಟ್ಟು ರಕ್ತದಾನವನ್ನು ಮಾಡಿ ಪರಿಸರದ ಜನರು ರಕ್ತನಿಧಿ ಕೇಂದ್ರದ ಸಂಪೂರ್ಣ ಅನುಕೂಲತೆಯನ್ನು ಪಡೆಯಬೇಕು ಹಾಗೂ ಹೆಚ್ಚು ಹೆಚ್ಚು ರಕ್ತದಾನ ಮಾಡಿ ಸಮಾಜದ ಅವಶ್ಯಕತೆಯನ್ನು ಪೂರೈಸುವಂತೆ ಕರೆ ನೀಡಿದರು. ವಾರದ ಸಭೆಯನ್ನು ರೋಟರಿ ಮತ್ತು ಆನ್ಸ್ ಕ್ಲಬ್ ಜಂಟಿಯಾಗಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಜಯಕರ್ ಶೆಟ್ಟಿ ಮಾತನಾಡುತ್ತಾ ರಾಜ್ಯದಲ್ಲಿಯೇ ಅತ್ಯುತ್ತಮವಾದ ಅತ್ಯಾಧುನಿಕ ರಕ್ತನಿಧಿ ಕೇಂದ್ರದ ರೂಪರೇಷೆ ಹಾಗೂ ಅದರ ಮುಂದೆ ಇರುವ ಸವಾಲುಗಳನ್ನು ವಿವರಿಸಿದರು. ಆನ್ಸ್ ಕ್ಲಬ್‌ನ ಛೇರ್‌ಮೆನ್ ಹಾಗೂ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ| ಹೆಚ್.ಎಸ್ ಮಲ್ಲಿ ಮಾತನಾಡುತ್ತಾ ರಕ್ತದಾನದ ಪೂರ್ಣ ಮಾಹಿತಿಯನ್ನು ಸಭೆಗೆ ತಿಳಿಯಪಡಿಸಿದರು. ರೋಟರಿ ಅಧ್ಯಕ್ಷ ಮನೋಜ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ನಿಯೋಜಿತ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ರಕ್ತದಾನ ಮಾಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸಿ ಕ್ಲಬ್ಬಿನ ಅರ್ಹ ಸದಸ್ಯರೆಲ್ಲರೂ ಕೇಂದ್ರಕ್ಕೆ ಬಂದು ರಕ್ತದಾನ ಮಾಡಲಿದ್ದಾರೆ ಎಂದು ತಿಳಿಸಿದರು. ರಕ್ತದಾನ ಮಾಡಿದವರಲ್ಲಿ ಸಂಸ್ಥೆಯ ಖಜಾಂಚಿ ಪ್ರದೀಪ್ ವಾಜ್, ನಿಯೋಜಿತ ದಂಡಪಾಣಿ ನೂಜಾಡಿ ಸಂತೋಷ್ ಶೆಟ್ಟಿ ಹಾಗೂ ಹಿರಿಯ ಸದಸ್ಯ ಡಾ| ಎಂ.ಎನ್. ಅಡಿಗ ತಮ್ಮ ಅನುಭವವನ್ನು ಹಂಚಿಕೊಂಡರು. ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಬಿಂದು ನಾಯರ್ ಆನ್ಸ್ ಕ್ಲಬ್ಬಿನ ನಿಯೋಜಿತ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸ್ಮಿತಾ ವೆಂಕಟೇಶ್ ಹಾಗೂ ಖಜಾಂಚಿ ರತ್ನಮ್ಮ ಹೊಳ್ಳ ಸಹಕರಿಸಿದರು.
ಈ ಸಂದರ್ಭದಲ್ಲಿ ಪ್ರಶಾಂತ್ ತೋಳಾರ್, ಡಾ| ಉಮೇಶ್ ಪುತ್ರನ್, ವಿ.ಆರ್.ಕೆ ಹೊಳ್ಳ, ಮುತ್ತಯ್ಯ ಶೆಟ್ಟಿ, ಡಾ| ಛಾಯಾ ಹೆಬ್ಬಾರ್, ಗೋಪಾಲ ಕೃಷ್ಣ ಶೆಟ್ಟಿ ಶಿರಿಯಾರ, ಕಾರ್ಯದರ್ಶಿ ಕೆ.ವಿ.ನಾಯಕ್, ಕೃಷ್ಣ ಕಾರಂತ್, ಚಂದ್ರ ಪೂಜಾರಿ, ನಿಯೋಜಿತ ಕಾರ್ಯದರ್ಶಿ ಸಂತೋಷ ಕೋಣಿ ಹಾಗೂ ರೆಡ್ ಕ್ರಾಸ್‌ನ ಸದಸ್ಯರು ಉಪಸ್ಥಿತರಿದ್ದರು.
ಫೋಟೋ ಇದೆ

Exit mobile version