Kundapra.com ಕುಂದಾಪ್ರ ಡಾಟ್ ಕಾಂ

ಅಭಿವೃದ್ಧಿಯಲ್ಲಿ ಪರಿಸರ ಚಿಂತನೆ ಅಗತ್ಯ

ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ಆಶ್ರಯದಲ್ಲಿ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ವಕ್ವಾಡಿ ಸತ್ಯನಾರಾಯಣ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಹಕ್ಲಾಡಿ ಎಸ್.ಕೆ.ಎಸ್ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಡಾ. ಕೆ. ಕಿಶೋರ ಕುಮಾರ್ ಶೆಟ್ಟಿ ಪರಿಸರ ಜಾಗೃತಿ ಬಗ್ಗೆ ಉಪನ್ಯಾಸ ನೀಡಿ,  ಪರಿಸರ ಸಂರಕ್ಷಣೆಗಿಂತ ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ನಾಗಲೋಟ ಪಡೆದುಕೊಳ್ಳುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಪ್ರಮಾಣಕ್ಕೆ ಸೆಡ್ಡು ಹೊಡೆಯುವಂತೆ ವಾಯು, ಜಲ. ಅಂತರ್ಜಲ ಮತ್ತು ಶಬ್ಬ ಮಾಲಿನ್ಯ ತಾರಕಕ್ಕೇರಿದೆ. ಮರ ಬೆಳೆಸಿ- ಪರಿಸರ ಉಳಿಸಿ, ಮನೆಗೊಂದು ಮರ ಎನ್ನುವ ಘೋಷಣೆ  ಮಾತ್ರ ಸಾಲದು. ನಮ್ಮೊಂದಿಗೆ ಎಲ್ಲರೂ ಬದುಕಬೇಕು ಎಂಬ ಮನೋಭಾವನೆಯಿಂದ ಜೀವ ಪರಿಸರದ ಸಮತೋಲನ ಇದ್ದರೆ ಮುಂದಿನ ಜನಾಂಗ ಉಳಿಯಲು ಸಾದ್ಯ ಎಂದರು.

ಕೈಗಾರಿಕಾ ಕ್ರಾಂತಿ ಎಲ್ಲಿಂದ ಆರಂಭ ವಾಯಿತೋ ಅಲ್ಲಿಂದ  ಮನುಷ್ಯ ಆಸೆ, ದುರಾಸೆಗೆ ಒಳಗಾಗಿ ಭ್ರಷ್ಟಾಚಾರದ ಜೊತೆಗೆ ಪರಿಸರದ ವಿನಾಶಕ್ಕೆ ಕಾರಣವಾಗಿದ್ದಾನೆ. ದೇಶಾಭಿವೃದ್ಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರದ ಚಿಂತನೆ ಅತ್ಯಗತ್ಯ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಮ್ಮಾಡಿ ಪ್ರೌಢ ಶಾಲಾ ಹಿರಿಯ ಶಿಕ್ಷಕ ಎಸ್.ದಿನಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ  ಕಾಲೇಜಿನವಿದ್ಯಾರ್ಥಿಗಳು ರಸ್ತೆ, ಕಾಲೇಜಿನ ಸುತ್ತ ಮುತ್ತಲಿನ ವಠಾರವನ್ನು ಸಚ್ಛಗೊಳಿಸಿದರು. ಕಲಾ ವಿದ್ಯಾರ್ಥಿನಿ  ಶ್ಚೇತ ಸ್ವಾಗತಿಸಿದರು. ವಾಣಿಜ್ಯ ವಿದ್ಯಾರ್ಥಿನಿ ಅನುಷಾ ನಿರೂಪಿಸಿದರು. ಸುಜಾತ ವಂದಿಸಿದರು.

Exit mobile version