Kundapra.com ಕುಂದಾಪ್ರ ಡಾಟ್ ಕಾಂ

ಶ್ವೇತಾ ಕರ್ಣಿಕ್ ಗೆ ಚಿನ್ನದ ಪದಕ

ಗಂಗೊಳ್ಳಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಶ್ವೇತಾ ಕರ್ಣಿಕ್ ಎಸ್. ರವರು ಎಂ.ಟೆಕ್. (ಡಿಜಿಟಲ್ ಕಮ್ಯೂನಿಕೇಶನ್ ಎಂಡ್ ನೆಟ್‌ವರ್ಕಿಂಗ್)ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು.

ಈಕೆ ಗಂಗೊಳ್ಳಿಯ ದಿ. ಎಸ್.ಲಕ್ಷ್ಮೀನಾರಾಯಣ ಕರ್ಣಿಕ್ ಹಾಗೂ ದಿ.ಸೀತಮ್ಮನವರ ಮೊಮ್ಮಗಳಾಗಿದ್ದು, ಬೆಂಗಳೂರಿನ ನಿವಾಸಿ ಉಷಾ ಹಾಗೂ ಸುರೇಶ ಕರ್ಣಿಕ್ ಅವರ ಪುತ್ರಿಯಾಗಿದ್ದಾಳೆ.

Exit mobile version