Kundapra.com ಕುಂದಾಪ್ರ ಡಾಟ್ ಕಾಂ

ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ಆರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಜಾತ್ರೆಯ ಸಂದರ್ಭ ಸಾರ್ವಜನಿಕರ ಹಿತದೃಷ್ಟಿಯಿಂದ ಬೀಜಾಡಿ ಸರ್ವೀಸ್ ರಸ್ತೆಯನ್ನು ಅಗೆದು ಹಾಕಿದ್ದು ಜಾತ್ರೆ ಮುಗಿದ ಬಳಿಕ ರಸ್ತೆಯನ್ನು ಮುಗಿಸುತ್ತೇವೆ ಎಂದು ಭರವಸೆ ನೀಡಿದ್ದರು. ಹಲವು ತಿಂಗಳು ಕಾಲ ಭರವಸೆ ಕೇವಲ ಮಾತಾಗಿಯೇ ಉಳಿದಿತ್ತು. ಬೀಜಾಡಿ ಸರ್ವೀಸ್ ರಸ್ತೆ ಹೋರಾಟ ಸಮಿತಿ ನೇತೃತ್ವದ ಸಂಘಟನೆ ಹುಟ್ಟಿಕೊಂಡು ಪ್ರತಿಭಟನೆಗೆ ಮುಂದಾದಾಗ ಶಿವಮೊಗ್ಗ ಲೋಕಸಭಾ ಉಪ ಚುಣಾವಣೆ ನೀತಿ ಸಂಹಿತೆ ಹೆಸರಲ್ಲಿ ಪ್ರತಿಭಟಿಸಲು ಅನುಮತಿ ನೀಡರಲಿಲ್ಲ. ಅದರೂ ಸಹ ಸಂಕೇತಿಕವಾಗಿ ಪ್ರತಿಭಟನೆ ಮಾಡಿ ನವಯುಗ ಕಂಪನಿಯನ್ನು ಎಚ್ಚರಿಸಿತು. ಇದಾದ ಬಳಿಕ ೨೦೧೯ ರ ಬಳಿಕ ಇನ್ನೂ ಕಾಮಗಾರಿ ಕೈಗೈತ್ತಿಕೊಳ್ಳದೇ ಕಂಪನಿ ತಟಸ್ಥವಾದಗ ಪುನಃ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದಾಗ ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ, ಸೇರಿದಂತೆ ನವಯುಗ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಮುಂದುವರಿಸುವ ಬಗ್ಗೆ ಕ್ರಮ ಕೈಗೊಂಡು ಮೊದಲ ಹಂತದಲ್ಲಿ ಬೀಜಾಡಿ ಕೆನಾರ ಬ್ಯಾಂಕ್ ಸಮೀಪ ಚರಂಡಿ ನಿರ್ಮಾಣ ಮತ್ತು ಬೀಜಾಡಿ ಪೂಜಾ ಮಾರ್ಬಲ್ ಸಮೀಪದ ಯೂ ಟರ್ನ್ ಭಾಗದಿಂದ ಬುಧವಾರ ಕಾಮಗಾರಿ ಕೈಗೊತ್ತಿಕೊಂಡಿದೆ.

ಸ್ಥಳೀಯರ ಹೋರಾಟಕ್ಕೆ ಮಾಧ್ಯಮ ಬೆಂಬಲ: ಪ್ರತಿದಿನ ಹತ್ತು ಹಲವು ರೀತಿಯ ಅಪಘಾತಗಳಿಂದಾಗಿ ತತ್ತರಿಸಿದ ಸಾರ್ವಜನಿಕರಿಗೆ ಹಲವು ಮಾಧ್ಯಮಗಳು ತಮ್ಮ ವರದಿಯನ್ನು ಪ್ರಕಟಿಸಿ ಹೋರಾಟಕ್ಕೆ ಮತ್ತುಷ್ಟು ಶಕ್ತಿಯನ್ನು ತುಂಬಿದ್ದವು. ಇದೇ ಸಂದರ್ಭ ಬೀಜಾಡಿ ಸರ್ವೀಸ್ ರಸ್ತೆ ಹೋರಾಟ ಸಮಿತಿ ಸಂಚಾಲಕ ರಾಜು ಬಿಟ್ಟಿನಮನೆ ಮಾಧ್ಯಮ ಪ್ರತಿನಿಧಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

Exit mobile version