ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಾಲ್ಯದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಜೀವನದಲ್ಲಿ ವಿಶೇಷ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಅಂತಹ ಕೆಲಸ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್ ಹೇಳಿದರು. ಬುಧವಾರ ನಡೆದ ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಶಾಲೆ ಈಚಿನ ದಿನಗಳಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದೆ. ಅದಕ್ಕೆ ಮುಖ್ಯೋಪಾಧ್ಯಾಯ, ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸಂಘಟಿತ ಪ್ರಯತ್ನ ಕಾರಣ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ ಗಾಣಿಗ, ಗಣೇಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ್ ಪೂಜಾರಿ, ಕಾರ್ಯದರ್ಶಿ ಎಂ. ಶಂಕರ ಬಿಲ್ಲವ, ಗೌರವಾಧ್ಯಕ್ಷ ವೆಂಕಟರಮಣ ಗಾಣಿಗ, ಬೆಂಕಿ ಬಾಯ್ಸ್ ತಂಡದ ಅಧ್ಯಕ್ಷ ಅಣ್ಣಪ್ಪ ಗಾಣಿಗ, ರಿಚರ್ಡ್ ಅಲ್ಮೇಡಾ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ಪೊ. ಜಿ. ಎಸ್. ಭಟ್, ನಾವುಂದ ಸಮೂಹ ಸಂಪನ್ಮೂಲ ವ್ಯಕ್ತಿ ಸುನಿಲ್‌ಕುಮಾರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಗಾಣಿಗ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಮಹಾಬಲೇಶ್ವರ ರೈ, ಚಂದ್ರ ಖಾರ್ವಿ, ವಿಜಯ ಡಿಸೋಜ, ದಿನೇಶ ಎಂ, ಭಾಸ್ಕರ ಗಾಣಿಗ, ಉದಯ ಗಾಣಿಗ, ರತ್ನಾಕರ ಆಚಾರ್, ಶೈಲಾ, ರೂಪಾ ಶೆಟ್ಟಿ, ಸುಜಾತಾ, ವೀಣಾಕ್ಷಿ, ಕವಿತಾ, ರೇವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಅರುಣಕುಮಾರ ಶೆಟ್ಟಿ, ಗೌರವ ಶಿಕ್ಷಕಿಯರಾದ ರೇಖಾ, ವಿದ್ಯಾಶ್ರೀ, ವಿದ್ಯಾಶ್ರೀ ಎನ್, ಮಾಯಾ, ಶ್ಯಾಮಲಾ, ಸಹಾಯಕಿ ಸುಶೀಲಾ, ಶ್ರೀಕಾಂತ ಹೆಬ್ಬಾರ್ ಇದ್ದರು.
ಶಿಕ್ಷಕಿ ಲೀಲಾ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಆನಂದ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಜಿ. ವಂದಿಸಿದರು. ಮಕ್ಕಳಿಗೆ ಬಹುಮಾನ ವಿತರಣೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.
ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಹಳೆವಿದ್ಯಾರ್ಥಿ ಸಂಘ ಎಂದು ಗುರುತಿಸಲಾಗಿರುವ ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ ಪೂಜಾರಿ ಮತ್ತು ಈಚೆಗೆ ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಶಾಲೆಯ ಹಳೆ ವಿದ್ಯಾರ್ಥಿ ಶ್ಯಾಮಲಾ ಕುಂದರ್ ಅವರನ್ನು ಸನ್ಮಾನಿಸಲಾಯಿತು.