Kundapra.com ಕುಂದಾಪ್ರ ಡಾಟ್ ಕಾಂ

ಕಟೀಲು ಸೀತಾರಾಮ ಕುಮಾರ್‌ಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇತ್ತೀಚೆಗೆ ಗುಜ್ಜಾಡಿಯ ಶ್ರೀ ಬ್ರಹ್ಮ ಬಂಟರ ಮತ್ತು ಕೋಟಿ ಚೆನ್ನಯ್ಯ ದೈವಗಳ ಗರಡಿಯಲ್ಲಿ ನಡೆದ ಯಕ್ಷಗಾನದ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು ಇವರನ್ನು ಗರಡಿಯ ಆಡಳಿತಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಢಳಿತ ಮಂಡಳಿಯ ಅಧ್ಯಕ್ಷ ಶಿವ ನಾಯ್ಕ್, ಕಾರ‍್ಯದರ್ಶಿ ಜಿ.ಸುಕ್ರ ಪೂಜಾರಿ, ದೈವ ಪಾತ್ರಿ ರಾಘವೇಂದ್ರ ಪೂಜಾರಿ. ಅರ್ಚಕರಾದ ಸುಬ್ಬ ಪೂಜಾರಿ, ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಆನಂದ ಪೂಜಾರಿ , ರಾಜು ಶ್ರೀಯಾನ್ , ಸುರೇಂದ್ರ ಕೊಠಾರಿ, ಉಪನ್ಯಾಸಕ ಕೃಷ್ಣ ಗುಜ್ಜಾಡಿ ಮತ್ತು ಕೋಟಿ ಚೆನ್ನಯ್ಯ ಯುವಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

Exit mobile version