Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಪ್ರಥಮ ಕಿರು ಚಿತ್ರ ಸ್ಪರ್ಧೆ: ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿನಿ ಮಾಧ್ಯಮ ಸಮಾಜದಲ್ಲಿ ಪ್ರಭಾವ ಬೀರುವಂತದ್ದು. ಸಿನಿಮಾ ಅನ್ನುವುದು ಓಳ್ಳೆಯದು ಮತ್ತು ಕೆಟ್ಟದ್ದೂ ಇದೆ ಎನ್ನುವುದನ್ನು ಹೇಳುತ್ತಾರೆ. ಭಾರತದ ಸಿನಿಮಾ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರತಿಭೆಗಳನ್ನು ಹೊಂದಿರುವ ಕುಂದಾಪುರಕ್ಕೆ ಹೆಮ್ಮೆಯ ವಿಷಯ. ಕುಂದಾಪುರ ಭಾಗದ ಏಳಿಗ್ಗೆಗಾಗಿ ಸಿನಿ ದೃಶ್ಯಗಳನ್ನು ರಚಿಸುವಂತೆ ಆಗಲಿ ಎಂದು ಕುಂದಾಪುರ ಡಿವೈಎಸ್‌ಪಿ ಬಿ.ಪಿ. ದಿನೇಶ್‌ಕುಮಾರ್ ಹೇಳಿದರು.

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಭವನದಲ್ಲಿ ಐಶ್ವರ್ಯ ಮೀಡಿಯಾ ಆಯೋಜನೆಯ ಕುಂದಾಪುರ ಪರಿಸರದಲ್ಲಿ ಪ್ರಥಮ ಕಿರುಚಿತ್ರ ಸ್ಪರ್ಧೆ ಸಿನಿ ಕುಂದಾಪ್ರ 2019 ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅತಿಥಿ ಪ್ರತಕರ್ತ ಜಾನ್ ಡಿಸೋಜಾ ಶುಭಶಂಸನೆ ಮಾಡುತ್ತ ಚಿತ್ರ ದೃಶ್ಯಕರಿಸುವುದು ಪರಿಶ್ರಮ, ಕ್ರೀಯಾತ್ಮಕ ಚಿಂತನೆ ಆಗಿರುವ ಕೆಲಸಗಳು. ನಾವು ಮಾಡಬೇಕಾದ ಕೆಲಸಗಳ ಪ್ರಯತ್ನಗಳಿಗೆ ಅಭಿಲಾಷೆ, ಇಚ್ಚೆ, ಶ್ರಧ್ಧೆ ಇದ್ದಾಗ ಓಳ್ಳೆಯ ಫಲಿತಾಂಶಗಳನ್ನು ಕೊಡಬಹುದು. ಮುಂಬಯಿ ಮತ್ತು ಬೆಂಗಳೂರಿನಲ್ಲಿ ನಡೆಯುವಂತಹ ಸಿನಿಮಾ ಕಾರ್ಯಕ್ರಮಗಳ ಮಾದರಿಯಲ್ಲಿ ಇಂದು ಕೋಟೇಶ್ವರದಲ್ಲಿ ಐಶ್ವರ್ಯ ಮೀಡಿಯಾ ಸಿನಿ ಕುಂದಾಪ್ರ ಬಳಗ ಪ್ರಯತ್ನಗಳು ಮಾಡಿದ್ದಾರೆ. ಕುಂದಾಪುರ ಕನ್ನಡ ಇತಿಹಾಸ ಬಹಳಷ್ಟು ವರ್ಷಗಳ ಹಿಂದಿನದ್ದು ಎಂದು ನಮ್ಮ ಸಾಹಿತಿಗಳು ಹೇಳುತ್ತಾರೆ. ಆಗಾಗ್ಗಿ ಒಂದು ಶಕ್ತಿಯುತವಾದ ಭಾಷೆ ಕುಂದಾಪ್ರ ಕನ್ನಡ ಎಂದು ಪ್ರತಿಪಾದನೆ ಮಾಡಬಹುದು. ಕುಂದಾಪುರದ ಕುಂದಗನ್ನಡ ಭಾಷೆಯಲ್ಲಿ ಪ್ರಥಮ ಬಾರಿಗೆ ಕಿರುಚಿತ್ರ ಸ್ಪರ್ಧೆ ಮಾಡಿರುವುದು ಇತಿಹಾಸವಾಗಿದೆ. ಬಹಳಷ್ಟು ಕ್ರೀಯಾತ್ಮವಾಗಿ ಸಿನಿಕುಂದಾಪ್ರ ೨೦೧೯ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿರುವುದು ಶ್ಲಾಘನೀಯ ಎಂದರು.

ಶಿಕ್ಷಕ ಮತ್ತು ಸ್ಕ್ರೀನ್ ರೈಟರ್ ಪ್ರದೀಪಕುಮಾರ್ ಶೆಟ್ಟಿ ಸಿನಿಮಾ, ಸಿನಿಮಾ ಭಾಷೆ ಮತ್ತು ಪ್ರಾಮುಖ್ಯತೆ ವಿಷಯದ ಕುರಿತು ಮಾತನಾಡಿದರು.

ಸಿನಿ ಕುಂದಾಪ್ರ ಸಾಧಕ ಸಂಕಲನಕಾರ ಗೌರವ: ಬೆಂಗಳೂರಿನ ಚಲನಚಿತ್ರ ಸಂಕಲನಕಾರ ಬಿ. ಎಸ್ ಕೆಂಪರಾಜು ಅವರಿಗೆ ಐಶ್ವರ್ಯ ಮೀಡಿಯಾರವರಿಂದ ಸಂಕಲನಕಾರರಿಗೆ ಕೊಡಮಾಡುವ ಸಿನಿ ಕುಂದಾಪ್ರ ಸಾಧಕ ಸಂಕಲನಕಾರ ಗೌರವ ಪ್ರಥಮ ಗೌರವದ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಐಶ್ವರ್ಯ ಮೀಡಿಯಾ ಎಡಿಟಿಂಗ್ ಸ್ಟುಡಿಯೋ ಮತ್ತೊಬ್ಬ ಎಡಿಟರ್‌ಗೆ ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸ್ಪರ್ಧೆಗೆ ಬಂದಂತಹ ಚಿತ್ರಗಳು ಬೇರೆ ಬೇರೆ ಆಯಾಮಗಳನ್ನು ಅವರವರ ದೃಷ್ಟಿಕೋನದಲ್ಲಿ ತೋರಿಸಿದ್ದಾರೆ. ಚಿತ್ರಗಳ ಸಂಕಲನ ಮಾಡಬೇಕಾದ ಪ್ರಮುಖವಾಗಿ ದೃಶ್ಯ ಮತ್ತು ಶಬ್ಧಗಳ ಗಮನ ಕೊಡಬೇಕು ಹಾಗೂ ಅಷ್ಟೇ ಚೆಂದ ಮತ್ತು ಪ್ರಾಮುಖ್ಯತೆ ಕೊಡಬೇಕು. ದೃಶ್ಯದ ಜೊತೆಗೆ ಶಬ್ಧಗಳ ಗಮನ ಕೊಡದೆ ಇದ್ದಾಗ ಅಂತಹ ದೃಶ್ಯಗಳು ಪರಿಣಾಮಾ ಬೀರುವುದಿಲ್ಲ. ಎಡಿಟಿಂಗ್‌ನಲ್ಲಿ ಜಾಸ್ತಿ ಗಿಮಿಕ್ ಮಾಡಿದಾಗ ನೋಡುಗರಿಗೆ ಕಿರಿಕಿರಿ ಮಾಡುತ್ತದೆ. ಚಿತ್ರದಲ್ಲಿ ನಾವು ಏನ್ನನ್ನೂ ತೋರಿಸಬೇಕು ಅನ್ನುವ ವಿಚಾರ ಸಂಕಲನಕಾರರು ಗಮನದಲ್ಲಿಡಬೇಕು ಎಂದರು.

ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ರಂಗ ನಿರ್ದೇಶಕ ಸದಾನಂದ ಬೈಂದೂರು, ಬೆಂಗಳೂರು ಕಾಣಿ ಸ್ಟುಡಿಯೋ ಮಾಲಿಕ ಸಂತೋಷ ಬಳ್ಕೂರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಈ ಸಭೆಯಲ್ಲಿ ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕುಂದಾಪುರ ಸಂಸ್ಕೃತಿಯ ಬಿಂಬಿಸುವ ಅಡಿಕೆ ಸಸಿಗಳು, ತಟ್ಟಿರಾಯ, ರಥ, ಸ್ಮರಣಿಕೆಯನ್ನು ನೀಡಲಾಯಿತು.

ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ಆನ್ಸ್ ಸದಸ್ಯೆ ರಜನಿ ಗೋಪಾಲ ಶೆಟ್ಟಿ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ಕೃಷ್ಣಮೂರ್ತಿ ಪಿ.ಕೆ, ಮಾಜಿ ಕಾರ್ಯದರ್ಶಿ ನಾಗೇಶ ಶೆಟ್ಟಿಗಾರ್, ಐಶ್ವರ್ಯ ಮೀಡಿಯಾ ಮಾಲಿಕ, ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಎಸ್ ಬೀಜಾಡಿ, ಸಿನಿ ಕುಂದಾಪ್ರ ತಂಡದವಾರದ ಅಕ್ಷಯ್ ಶೆಟ್ಟಿ, ಸಂದೀಪ ಶೆಟ್ಟಿಗಾರ್, ಶಶಾಂಕ ಮಂಜ, ಪ್ರಲ್ಲಾಪ್ ಹುಣ್ಸೆಮಕ್ಕಿ, ಸಚಿನ್ ಆಚಾರ್ಯ, ಸಂಜಯ ಮಡಿವಾಳ, ವಾದಿರಾಜ ಆಚಾರ್ಯ, ವಿಘ್ನೇಶ್ ಆಚಾರ್ಯ, ಶ್ರೀಕಾಂತ್ ಆಚಾರ್ಯ, ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು. ಸುಷ್ಮಾ ಆಚಾರ್ಯ ಪ್ರಾರ್ಥಿಸಿದರು. ಶಿವಾನಂದ ದೋಡ್ಡೋಣಿ ಕಾರ್ಯಕ್ರಮ ನಿರ್ವಹಿಸಿದರು. ರಾಘವೇಂದ್ರ ಕೆ.ಸಿ, ಸತ್ಯನಾರಾಯಣ ಮಂಜ, ಗಣೇಶ್ ಮಂಜ, ಮಿತ್ರ ಮಂಜ ಸಹಕರಿಸಿದರು. ರಾಘವೇಂದ್ರ ಎಸ್ ಬೀಜಾಡಿ ವಂದಿಸಿದರು.

ಸ್ಪರ್ಧಾ ಫಲಿತಾಂಶ: ಸಿನಿ ಕುಂದಾಪ್ರ 2019 ಬೆಸ್ಟ್ ಶಾರ್ಟ್ ಫಿಲ್ಮ್ಸ್ ಫರ್‌ಫಾರ್ಮರ‍್ಸ್ ಆವಾರ್ಡ್: ಉತ್ತಮ ಸಂಭಾಷಣೆ: ಅಜ್ಜಿಮನಿ (ಬ್ರಾಹ್ಮೀ ಕ್ರೀಯೆಷನ್), ಹೆತ್ತವರು (ಕಲಾಚಿಗುರು ಕ್ರೀಯೆಷನ್), ಇಲ್ಲಿಪ್ದೆ ನನ್ನೂರು (ಶ್ರೀ ಲವಿ ಕ್ರೀಯೆಷನ್), ಕಡಲಾಳ (ಡಾ| ಬಿಬಿ ಹೆಗ್ಡೆ ಸ್ಟೂಡೇಂಟ್ಸ್), ಕುಂದಾಪ್ರ (ನಾಗೂರು ಕ್ರೀಯೆಷನ್), ಉತ್ತಮ ಅಭಿನಯ: ಧೂಮ (ಚಿತ್ರ: ಹೆತ್ತವರು, ಕಲಾವಿದ: ಚೇತನ್ ನೈಲಾಡಿ), ಉತ್ತಮ ಕಥೆ: ಕಡಲಾಳ, ಉತ್ತಮ ಸಂಕಲನ: ಇಲ್ಲಿಪ್ದೆ ನನ್ನೂರು (ರೂಪೇಶ್ ಅಂಚನ್, ಅನಿಲ್ ಕುಂದಾಪ್ರ), ಉತ್ತಮ ಸಂಗೀತ: ಇಲ್ಲಿಪ್ದೆ ನನ್ನೂರು (ಕಾರ್ತಿಕ್ ರಾಜ್ ಸಾಸ್ತಾನ, ಪ್ರಕಾಶ ಕುಂದಾಪುರ), ಉತ್ತಮ ಛಾಯಾಚಿತ್ರೀಕರಣ: ಅಜ್ಜಿಮನಿ (ರೋಹಿತ್ ಅಂಪಾರು), ಉತ್ತಮ ನಿರ್ದೇಶನ: ಅಜ್ಜಿಮನಿ (ರಾಘವೇಂದ್ರ ಶಿರಿಯಾರ)

ಸಿನಿ ಕುಂದಾಪ್ರ 2019 ಸ್ಪೇಷಲ್ ಮೆನ್ಶನ್ ಶಾರ್ಟ್ ಫಿಲ್ಮ್ಸ್ ಆವಾರ್ಡ್: ಕಡಲಾಳ ಮತ್ತು ಕುಂದಾಪ್ರ, ಸಿನಿ ಕುಂದಾಪ್ರ 2019 ಬೆಸ್ಟ್ ಶಾರ್ಟ್ ಫಿಲ್ಮ್ಸ್ ಆವಾರ್ಡ್: ಇಲ್ಲಿಪ್ದೆ ನನ್ನೂರು ಮತ್ತು ಹೆತ್ತವರು, ಸಿನಿ ಕುಂದಾಪ್ರ ೨೦೧೯ ಎಕ್ಸ್‌ಲೆಂಟ್ ಶಾರ್ಟ್‌ಫಿಲ್ಮ್ಸ್: ಅಜ್ಜಿಮನಿ

Exit mobile version