Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಮತದಾನ – ಜನಜಾಗೃತಿ – ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಮುಖ್ಯ ಚುನಾವಣಾ ಅಧಿಕಾರಿಗಳ ಆದೇಶದಂತೆ ಮತದಾನದ ಬಗ್ಗೆ ಜನಜಾಗೃತಿ ಮೂಡಿಸಲು ಕುಂದಾಪುರದ ಸಂಗಮ್‌ಯಿಂದ ಆನಗಳ್ಳಿಯವರೆಗೆ ಅಭಿಯಾನ ನಡೆಸಲಾಯಿತು. ಕಾಲೇಜಿನ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕುಂದಾಪುರದ ಕಂದಾಯ ಅಧಿಕಾರಿ ಭರತ್ ವಿ. ಶೆಟ್ಟಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಕುಂದಾಪುರದ ಟ್ರಾಫಿಕ್ ಎ.ಎಸ್.ಐ. ಜನಾರ್ದನ ಎಮ್. ಮತ್ತು ಯು ಸುಧಾ ಪ್ರಭು, ಕಾಲೇಜಿನ ಎನ್.ಎಸ್.ಎಸ್, ಅಧಿಕಾರಿ ಸತೀಶ್ ಶೆಟ್ಟಿ ಹೆಸ್ಕತ್ತೂರು, ಪೊಲೀಸ್ ಸಿಬ್ಬಂದಿಗಳಾದ ಪ್ರಸನ್ನ, ಚೇತನ್, ವಿಜಯ್ ಉಪಸ್ಥಿತರಿದ್ದರು.

ಕಾಲೇಜಿನ 1250 ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡರು.

Exit mobile version