Site icon Kundapra.com ಕುಂದಾಪ್ರ ಡಾಟ್ ಕಾಂ

ನೀರಿಗೆ ಬಿದ್ದು ಸಾವು

ಕುಂದಾಪುರ: ಗುಲ್ವಾಡಿ ಗ್ರಾಮದ ಸೌಕೂರು ಚಿಕ್ಕಪೇಟೆ ನಿವಾಸಿ ಶೇಖರ (28) ಅವರು ಜೂ. 7ರಂದು ಕಂಡ್ಲೂರು ಪೇಟೆಗೆಂದು ಹೊರಟವರು ಕಾಲು ಸಂಕ ದಾಟುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗುಲ್ವಾಡಿ ಗ್ರಾಮದ ಕುಚ್ಚೆಟ್ಟು ಹೊಳೆಯ ಕಟ್ಟುವಿನ ಬಳಿ ಹೊಳೆಯ ನೀರಿನಲ್ಲಿ ಜೂ. 8ರಂದು ಬೆಳಗ್ಗೆ ಮೃತದೇಹ ದೊರೆತಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version