ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಲ್ಲವ ಸಮಾಜ ಸೇವಾಸಂಘ ರಿ. ಯಡ್ತರೆ ಬೈಂದೂರು ಇದರ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಗುರು ಸಂದೇಶ ಜಾಥಾ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಶೋಭಾಯಾತ್ರೆಯ ಬಳಿಕ ಬೈಂದೂರಿನ ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಬಿಲ್ಲವ ಸಮಾಜ ಶ್ರೀ ಸತ್ಯನಾರಾಯಣ ಮಹಾಪೂಜೆ, ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಶ್ರೀ ಸತ್ಯನಾರಾಯಣ ದೇವರನ್ನು ಪ್ರತಿಷ್ಟಾಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕ ಕೃಷ್ಣ ಮೂರ್ತಿ ನಾವುಡ ಅವರು ಪೂಜಾಧಿಗಳನ್ನು ನೆರವೇರಿಸಿದರು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಳಿಕ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು.
ವಾರ್ಷಿಕೋತ್ಸವ ಪ್ರಯುಕ್ತ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ ದೊಟ್ಟಯ್ಯ ಪೂಜಾರಿಯವರು ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕರಾದ ಕೆ ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ ಯಡ್ತರೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜು ಪೂಜಾರಿ, ವೆಂಕಟ ಪೂಜಾರಿ ಸಸಿಹಿತ್ಲು, ಶಿವರಾಮ ಪೂಜಾರಿ ಯಡ್ತರೆ, ಗಣೇಶ್ ಎಲ್ ಹೊಸ್ಕೋಟೆ, ರಾಮ ಪೂಜಾರಿ ಪಡುವರಿ, ಮುತ್ತಯ್ಯ ಪೂಜಾರಿ ಸಸಿಹಿತ್ಲು, ಅಣ್ಣಪ್ಪ ಪಾತ್ರಿ, ಬಾಬು ಪೂಜಾರಿ ಬಂಕೇಶ್ವರ, ಮುತ್ತಯ್ಯ ಪೂಜಾರಿ ತಗ್ಗರ್ಸೆ, ಜಯಕರ ಪೂಜಾರಿ, ಅಣ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭ ತನ್ನ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶರ್ಮಿಳಾ ಯೋಜನಾನಗರ ಇವರಿಗೆ ಸಂಘದ ವತಿಯಿಂದ ಧನ ಸಹಾಯವನ್ನು ನೀಡಲಾಯಿತು. ಪುರೋಹಿತರಾದ ಕೃಷ್ಣ ಮೂರ್ತಿ ನಾವಡ ರಿಗೆ ಗೌರವಿಸಲಾಯಿತು
ಸಂಘದ ಕಾರ್ಯದರ್ಶಿಯಾದ ಕಿಶೋರ್ ಸಸಿಹಿತ್ಲು ಸ್ವಾಗತಿಸಿದರು, ಮಂಜುನಾಥ ಮತ್ತು ಪ್ರಭಾಕರ ಬಿಲ್ಲವ ಅವರು ಕಾರ್ಯಕ್ರಮ ನಿರೂಪಿಸಿದರು, ಗಣೇಶ್ ಪೂಜಾರಿ ವಂದಿಸಿದರು.
ಯಡ್ತರೆ ಬೈಪಾಸ್‌ನಿಂದ ವತ್ತಿನಕಟ್ಟೆ ದೇವಸ್ಥಾನದ ವರೆಗೆ ನಡೆದ ಜಾಥಾದಲ್ಲಿ ಮಹಿಳಾ ಚಂಡೆ ವಾದನ, ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು ಅವಳಿ ವೀರ ಪುರುಷರಾದ ಕೋಟಿ ಚೆನ್ನಯ್ಯರ ಟ್ಯಾಬ್ಲೊಗಳು ಆಕರ್ಷಣಿಕವಾಗಿದ್ದವು.