Site icon Kundapra.com ಕುಂದಾಪ್ರ ಡಾಟ್ ಕಾಂ

ರಂಗದಲ್ಲೇ ಕುಸಿದು ಸಾವನ್ನಪ್ಪಿದ ಯಕ್ಷಗಾನ ಕಲಾವಿದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಕ್ಷಗಾನ ಪ್ರದರ್ಶನದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಏಳಜಿತ ಗ್ರಾಮದ ಜೋಗಿಜೆಡ್ಡು ಎಂಬಲ್ಲಿ ನಡೆದಿದೆ. ಪ್ರಸಿದ್ಧ ಕಲಾವಿದ ಉತ್ತರ ಕನ್ನಡದ ಹುಡುಗೋಡು ನಿವಾಸಿ ಚಂದ್ರಹಾಸ (೫೨) ಮೃತರು.

ಯಕ್ಷಗಾನ ಪ್ರದರ್ಶನದ ವೇಳೆ ಒಮ್ಮೆ ಕುಣಿದು ಮಾತು ಮುಗಿಸಿ ಮರಳಿ ಕುಣಿತಕ್ಕೆ ಅಣಿಯಾಗುತ್ತಿದ್ದ ವೇಳೆ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

Exit mobile version