Kundapra.com ಕುಂದಾಪ್ರ ಡಾಟ್ ಕಾಂ

ದೇಶದ ಕಟ್ಟಕಡೆಯ ಮಗುವಿಗೂ ಗುಣಮಟ್ಟದ ಶಿಕ್ಷಣ ರೋಟರಿ ಗುರಿ

ಗಂಗೊಳ್ಳಿಯ ಅಂಜುಮಾನ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಗಂಗೊಳ್ಳಿ: ಕಳೆದ 17 ವರ್ಷಗಳಿಂದ ಪಲ್ಸ್ ಪೋಲಿಯೋ ಅಭಿಯಾನವನ್ನ ಕೈಗೊಂಡ ರೋಟರಿ ಕ್ಲಬ್ ಪೋಲಿಯೋ ಮುಕ್ತ ಭರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಅದರಂತೆ ಕಳೆದ 5 ವರ್ಷಗಳಿಂದ ಸಾಕ್ಷರತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ದೇಶದ ಕಟ್ಟಕಡೆಯ ಮಗುವೂ ಕೂಡ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂಬ ದಿಶೆಯಲ್ಲಿ ರೋಟರಿ ಕಾರ್ಯನಿರ್ವಹಿಸುತ್ತಿದೆ ಎಂದು ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷ ಅಬ್ದುಲ್ ಬಶೀರ್ ಕೋಟ ಹೇಳಿದರು.

ಅವರು ಜೂ.11ರಂದು ರೋಟರಿ ಕ್ಲಬ್ ಮಿಡ್‌ಟೌನ್ ವತಿಯಿಂದ ಗಂಗೊಳ್ಳಿಯ ಅಂಜುಮಾನ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಕೊಡ ಮಾಡಲ್ಪಟ್ಟ ಇ-ಶಾಲೆ ಸ್ಮಾರ್ಟ್ ಕ್ಲಾಸನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಅರ್ಹವಾದ ಶಾಲೆಯನ್ನು ಗುರುತಿಸಿ ಸ್ಮಾರ್ಟ್ ಕ್ಲಾಸನ್ನು ಕೊಡುಗೆಯಾಗಿ ನೀಡಿದ್ದು ದಿನೇ ದಿನೇ ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆಯುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ಗಂಗೊಳ್ಳಿಯ ಅಂಜುಮಾನ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೆಲ್ಕೋ ಸೋಲಾರ್ ಲೈಟ್ ಕಂಪನಿಯ ಇ-ಶಾಲೆ ಕಲಿಕೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸಿದ್ದು ಸೌರಶಕ್ತಿ ಇಂಧನದಿಂದ ನಿರ್ವಹಿಸಲಾಗುತ್ತಿದೆ.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಿಡ್‌ಟೌನ್ ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಸೆಲ್ಕೋ ಸೋಲಾರ್ ಕಂಪೆನಿಯ ಅಸಿಸ್ಟೆಂಟ್ ಜನರಲ್ ಮೆನೇಜರ್ ಗುರುಪ್ರಕಾಶ್ ಶೆಟ್ಟಿ, ಮುಖ್ಯೋಪಧ್ಯಾಯಿನಿ ಪ್ರಮೀಳ ಟೀಚರ್, ಗಂಗೊಳ್ಳಿಯ ಅಂಜುಮಾನ್ ನೂರುಲ್ ಇಸ್ಲಾಂನ ಕಾರ್ಯದರ್ಶಿ ಬಾಷಾ ಸಾಹೇಬ್, ಜಂಟಿ ಕಾರ್ಯದರ್ಶಿ ಮೌಲಾನ ಮಹಮದ್ ತಮೀಮ್, ಅಂಜುಮಾನ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಕಾರ್ಯದರ್ಶಿ ಮಂಝುರ್ ನಾಕುದ, ರೋಟರಿ ಸದಸ್ಯ ರಾಮ ನಾಯ್ಕ್, ಸೆಲ್ಕೋ ಸೋಲಾರ್ ಕಂಪೆನಿಯ ಸೀನಿಯರ್ ಮೆನೇಜರ್ ಶೇಖರ್ ಶೆಟ್ಟಿ, ಬ್ರಾಂಚ್ ಮೆನೇಜರ್ ಮಂಜುನಾಥ ಉಪಸ್ಥಿತರಿದ್ದರು. ತಸ್ಮಿಯಾ ಅತಿಥಿಗಳನ್ನು ಪರಿಚಯಿಸಿದರು. ಮೌಲಾನ ಅಫ್ರಾ ಕಾರ್ಯಕ್ರಮ ನಿರ್ವಹಿಸಿ, ಸುರಯ್ಯ ಮೆಹಮೂದ್ ವಂದಿಸಿದರು.

Exit mobile version