Kundapra.com ಕುಂದಾಪ್ರ ಡಾಟ್ ಕಾಂ

ಅಂಬುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದ ಯುವಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಉಳ್ತೂರು ಜಯಶೀಲ ಪೂಜಾರಿ ಎನ್ನುವ ಯುವಕ ಕಳೆದ ಮೂರು ವಾರದ ಹಿಂದೆ ಅಪಘಾತಕ್ಕೆ ಸಿಲುಕಿ ಗಂಭೀರ ಗಾಯಗೊಂಡು ವಿಶ್ರಾಂತಿಯಲ್ಲಿದ್ದರೂ ಮನೆಯಿಂದ ಅಂಬುಲೆನ್ಸ್‌ನಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ.

ಕಾಲಿಗೆ ಬಿದ್ದ ಏಟಿನಿಂದ ಮಗ್ಗಲು ಕೂಡಾ ಬದಲಾಯಿಸಲಾಗದ ಸ್ಥಿತಿಯಲ್ಲಿದ್ದರೂ, ಇತ್ತೀಚೆಗೆ ಆಸ್ಪತ್ರೆಯಿಂದ ಮನೆಗೆ ಮರಳುವಾಗ ಮೂರು ತಿಂಗಳು ಹಾಸಿಗೆ ಬಿಟ್ಟೇಳಬಾರದು ಎನ್ನೋದು ವೈದ್ಯರು ಖಡಕ್ ಎಚ್ಚರಿಕೆ ಇದ್ದರೂ ಆದರೆ ಮೋದಿಗೆ ಓಟ್ ಹಾಕಬೇಕು ಎನ್ನುವ ಒಂದೇ ಒಂದು ಉದ್ದೇಶದಿಂದ ಮನೆಯಿಂದ ಅಂಬುಲೆನ್ಸ್‌ನಲ್ಲಿ ಮತಗಟ್ಟೆಗೆ ಬಂದು ಅಲ್ಲಿಂದ ಸ್ಟೆಚ್ಚರ್ ಮೂಲಕ ಮತಕೇಂದ್ರಕ್ಕೆ ತೆರಳಿ, ಮನೆಯವರ ಸಹಕಾರದಲ್ಲಿ ಮತದಾನ ಮಾಡಿದರು.

Exit mobile version