Kundapra.com ಕುಂದಾಪ್ರ ಡಾಟ್ ಕಾಂ

ಯಡ್ತರೆ ಪಾಣ್ತಿಗರಡಿ: ಭಕ್ತರಿಂದ ದೈವ ಬಿಂಬಗಳ ಪುರಮೆರವಣಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಜರುಗುತ್ತಿರುವ ಪುನರ್‌ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವದ ಅಂಗವಾಗಿ ದೈವಗಳ ಬಿಂಬಗಳನ್ನು ಗುರುವಾರ ಪುರಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಗಳ ಬಿಂಬಗಳನ್ನು ವಾಸ್ತುಶಿಲ್ಪಿಗಳು ಶಿಲ್ಪಿ ಶಸ್ತ್ರ ಪೂಜೆಯ ಬಳಿಕ ದೇವಳದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮೋಹನ ಪೂಜಾರಿ ಉಪ್ಪುಂದ ಅವರಿಗೆ ಹಸ್ತಾಂತರಿಸಿದರು. ಬಳಿಕ ಶಿಲ್ಪಿಗಳನ್ನು ಗೌರವಿಸಲಾಯಿತು.

ಬಳಿಕ ಬಿಂಬ ಪರಿಗ್ರಹ ಬಿಂಬ ಶುದ್ಧಿ ಹೋಮ, ಪೂಜೆ, ಶಯ್ಯಾಕಲ್ಪ ಬಿಂಬಾಧಿವಾಸ ಹೋಮ, ಕಲಶ ಮಂಡಲ ರಚನೆ, ಮಂಡಲ ಪೂಜೆ, ಅಷ್ಟೋತ್ತರ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾನನೆ, ಕಲಶಾಧಿವಾಸ ಹೋಮ, ಶ್ರೀ ದೈವಗಳ ಬಿಂಬ ಪ್ರತಿಷ್ಠಾ ಸಹಿತ ಜೀವ ಕುಂಭಾಭಿಷೇಕ ಪ್ರತಿಷ್ಠಾ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ, ಕಲಾತತ್ವನ್ಯಾಸ ಲಿಪಿನ್ಯಾಸಧಿ ಸಹಿತ ಪೂಜೆ, ಮಂಗಳಾರತಿ ಮೊದಲಾದ ಕಾರ್ಯಕ್ರಮಗಳು ಜರುಗಿದವು.

Exit mobile version