ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಡಿಪ್ಲೋಮ ಇನ್ ಅರ‍್ಚಿಟೆಕ್ಚರ್ ಸರ್ಟಿಫಿಕೇಟ್ ಕೋರ್ಸ್ ಮತ್ತು ಮೂರು ದಿನಗಳು ನಡೆಯಲಿರುವ ವಿಶುವಲ್ ಅರ್ಟ್ ತರಬೇತಿ ಕಾರ್ಯಾಗಾರಕ್ಕೆ ಎಂ.ಬಿ.ಎ ಸೆಮಿನಾರ್ ಹಾಲ್‌ನಲ್ಲಿ ಚಾಲನೆ ನೀಡಲಾಯಿತು.
ಉದ್ಯಮಿ ಅಬ್ದುಲ್ ರವೂಫ್ ಪುತ್ತಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ, ಮನುಷ್ಯನಿಗೆ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಶಿಸ್ತು ಮತ್ತು ಸಂಯಮ ಅತ್ಯಂತ ಮಹತ್ತರ ಪಾತ್ರವನ್ನು ವಹಿಸುತ್ತದೆ. ಜಗತ್ತಿನ ಶ್ರೇಷ್ಠ ಕಟ್ಟಡಗಳಲ್ಲಿ ಒಂದಾದ ಬುರ್ಜಾ ಖಲೀಫ್ ಮತ್ತು ಏಫೇಲ್ ಟವರ್‌ನ ನೀರ್ಮಾಣದ ಹಿಂದೆ ಅವಿರತ ಶ್ರಮದ ಜೊತೆಗೆ ಶಿಸ್ತು ಇದೆ ಎಂಬುದನ್ನು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗಮನಿಸಬೇಕೆಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿ, ಉದ್ಯೋಗದ ಅವಕಾಶ ಕಡಿಮೆ ಇದೆ ಎಂಬ ಮಾತು ಸತ್ಯಕ್ಕೆ ದೂರ, ಅದ್ದರಿಂದ ಸಿಕ್ಕ ಅವಕಾಶವನ್ನು ಸದುಪಯೋಗನ್ನು ಪಡಿಸಿಕೊಂಡು, ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಡಿಂಸ್, ವಿಭಾಗದ ಮುಖ್ಯಸ್ಥ ಡಾ. ಹೆಎಚ್. ಅಜಿತ್ ಹೆಬ್ಬಾರ್, ಕಾರ‍್ಯಕ್ರಮದ ಸಂಯೋಜಕ ಪ್ರೊ. ವೀಣಾ ಡಿ ಸಾವಂತ್, ಪ್ರೊ. ಅರುಣ್ ಕುಮಾರ್ ಜಿ.ಎಸ್, ಪ್ರೊ. ರಶ್ಮಿ ಹೆಚ್, ಪ್ರೊ. ಸಂತೋಷ್ ಕೆ ಉಪಸ್ಥಿತರಿದ್ದರು.