Kundapra.com ಕುಂದಾಪ್ರ ಡಾಟ್ ಕಾಂ

ಯಕ್ಷಗಾನ ಒಂದು ಪರಿಪೂರ್ಣ ಕಲೆ: ಅಶ್ವಿನಿ ಕೊಂಡದಕುಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿನ ಯಶಸ್ವಿ ಕಲಾವೃಂದ ಹಾಗೂ ಕೈಲಾಸ ಕಲಾಕ್ಷೇತ್ರದ ನೇತೃತ್ವದಲ್ಲಿ ನಡೆಯುತ್ತಿರುವ ರಜಾರಂಗು 2019 ಇದರ 25ನೇ ದಿನ ಜ್ಞಾನ ರಂಜನಾ ಶಿಬಿರದಲ್ಲಿ ಯಕ್ಷಗಾನ ಕಾರ್ಯಾಗಾರ ಜರುಗಿತು.

ಯಕ್ಷದೇಗುಲ ಬೆಂಗಳೂರು ವತಿಯಿಂದ ನಡೆದ ಕಾರ್ಯಾಗಾರವನ್ನು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಉದ್ಘಾಟಿಸಿ ಮಾತನಾಡಿ ಅಬ್ಬರದ ವೇಷಭೂಷಣ, ಪ್ರಬುದ್ಧ ಮಾತುಗಾರಿಕೆ, ನೃತ್ಯ, ಹಾವ-ಭಾವ-ತಾಳ-ಅಭಿನಯವನ್ನು ಒಳಗೊಂಡಿರುವ ಯಕ್ಷಗಾನ ಪರಿಪೂರ್ಣ ಕಲಾ ಪ್ರಾಕಾರ ಎಂದು ಹೇಳಿದರು.

ಶಿಬಿರಾರ್ಥಿಗಳಿಗೆ ರಂಗದಲ್ಲಿ ಚೌಕಿ ಮನೆಯಲ್ಲಿ ವೇಷ ತಯಾರಾಗುವ ಬಗೆ ರಂಗದಲ್ಲಿಯೇ ತೋರಿಸುವ ಮೂಲಕ ಅಭಿನಯದಲ್ಲಿ ಪ್ರವೇಶ, ಮುದ್ರೆಗಳು, ತಾಳಗಳು, ಯಾವ ವೇಷಗಳನ್ನು ಹೇಗೆ ಬಳಸಬಹುದು ಎನ್ನುವ ಬಗ್ಗೆ ತರಬೇತಿ ನೀಡಲಾಯಿತು.

ಯಕ್ಷದೇಗುಲ ಬೆಂಗಳೂರು ಇದರ ಸಂಘಟಕ ಕೋಟ ಸುದರ್ಶನ ಉರಾಳ, ಉಪನ್ಯಾಸಕ ಸುಜಯೀಂದ್ರ ಹಂದೆ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಹೆರಿಯ ಮಾಸ್ಟರ್, ಛಾಯಾಚಿತ್ರಗ್ರಾಹಕ ಪಾಂಡುರಂಗ ಕೋಮೆ ಉಪಸ್ಥಿತರಿದ್ದರು. ಪ್ರಣಮ್ಯಾ ಸ್ವಾಗತಿಸಿ, ನಿಶಾ ಮಲ್ಯಾಡಿ ನಿರೂಪಿಸಿ ವಂದಿಸಿದರು.

Exit mobile version