Kundapra.com ಕುಂದಾಪ್ರ ಡಾಟ್ ಕಾಂ

ನಮ್ಮ ಕುಂದಾಪ್ರ ಕನ್ನಡ ಗಲ್ಫ್: ಕುಂದಗನ್ನಡಿಗರ ಮನಗೆದ್ದ ಕುಟುಂಬ ಮಿಲನ -2019

ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಬೈ: ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಇದರ ಎರಡನೇ ವಾರ್ಷಿಕೋತ್ಸವ ಮತ್ತು ಕುಟುಂಬ ಮಿಲನ ಕಾರ್ಯಕ್ರಮ ದುಬಾಯಿ ಅಜಮನ್‌ನ ಹ್ಯಾಬಿಟೆಟ್ ಸ್ಕೂಲ್‌ನ ಸಭಾಂಗಣದಲ್ಲಿ ಸಂಭ್ರಮದಿಂದ ಜರುಗಿತು.

ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್‌ನ ಮುಖ್ಯಸ್ಥ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಕುಂದಾಪುರ ತಾಲೂಕಿನವರ ಸಾಧನೆ ಅಪಾರ. ದೇಶ ವಿದೇಶಗಳಲ್ಲೂ ನಮ್ಮ ಸಂಸ್ಕ್ರತಿ, ಸಂಪ್ರದಾಯ, ಧಾರ್ಮಿಕ ಆಚರಣೆಗಳು ಇಂದಿಗೂ ಕೂಡ ವಿಶೇಷ ಗೌರವವನ್ನು ಉಳಿಸಿಕೊಂಡಿದೆ. ಗಲ್ಫ್ ರಾಷ್ಟ್ರದಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ ನಮ್ಮವರಿಗೆ ಇಂತಹ ಕಾರ್ಯಕ್ರಮಗಳು ಪರಸ್ಪರ ಭಾಂದವ್ಯವನ್ನು ಬೆಳೆಸುತ್ತದೆ. ಮಾತ್ರವಲ್ಲದೆ ಉದ್ಯೋಗಕ್ಕಾಗಿ ದುಬನಲ್ಲಿ ಹಲವು ಸಮಸ್ಯೆಗಳಲ್ಲಿದ್ದವರಿಗೆ ಸಕಾಲದಲ್ಲಿ ಸ್ಪಂದನೆ, ಶೈಕ್ಷಣಿಕ ನೆರವು, ಆರೋಗ್ಯ ಕಾಳಜಿ ಮುಂತಾದ ಕಾರ್ಯಕ್ರಮಗಳನ್ನು ನಮ್ಮ ಕುಂದಾಪ್ರ ಕನ್ನಡ ದುಬ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನದಾಸ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಮ್ಮ ಕುಂದಾಪ್ರ ಕನ್ನಡದ ದುಬ ಇದರ ಗೌರವಾಧ್ಯಕ್ಷ ವರದರಾಜ್ ಶೆಟ್ಟಿ, ಉದ್ಯಮಿ ಮಣೆಗಾರ್ ಮೀರಾನ್ ಶಿರೂರು, ಬಿಗ್‌ಬಾಸ್ ಖ್ಯಾತಿಯ ಧನರಾಜ್, ಹಫೀಜ್, ಶೀನ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿಯವರಿಗೆ ಕುಂದಾಪ್ರ ಕನ್ನಡ ಉದ್ಯಮರತ್ನ ಪ್ರಶಸ್ತಿ, ಹಿರಿಯ ವಕೀಲರಾದ ಎ.ಎಸ್.ಎನ್ ಹೆಬ್ಬಾರ್‌ರವರಿಗೆ ಕುಂದಾಪುರ ಕನ್ನಡ ಭಾಷಾರತ್ನ ಪ್ರಶಸ್ತಿ, ಗಲದಾರಿ ಸಮೂಹ ಸಂಸ್ಥೆ ಸಿ.ಇ.ಓ ಮಹಮ್ಮದ್ ಯಾಯ್ಯಾ ಖಾಜಿಯವರಿಗೆ ಕುಂದಾಪ್ರ ಕನ್ನಡ ಔದ್ಯಮಿಕ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಮ್ಮ ಕುಂದಾಪ್ರ ಕನ್ನಡ ಬಳಗದ ಉಪಾಧ್ಯಕ್ಷ ದಿನೇಶ್ ದೇವಾಡಿಗ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಧಾಕರ ಪೂಜಾರಿ ವರದಿ ಮಂಡಿಸಿದರು. ಪ್ರಹ್ಲಾದ್ ಮತ್ತು ಆಶಾ ಶ್ರೀಧರ, ಭಾಗ್ಯ ಸಾಧನದಾಸ್ ಕಾರ್ಯಕ್ರಮ ನಿರ್ವಹಿಸಿದರು. ಕುಂದಾಪುರದ ವೈದ್ಯ ಸತೀಶ ಪೂಜಾರಿ ಸಂಗೀತ ಕಾರ್ಯಕ್ರಮ, ಎ.ಎಸ್.ಎನ್ ಹೆಬ್ಬಾರ್ ನಗೆ ಹಾಸ್ಯ ಚಟಾಕಿ, ಧನರಾಜ್ ಸಾಂಸ್ಕ್ರತಿಕ ಝಲಕ್, ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಬಳಗದವರಿಂದ ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಂಡಿತು.

Scroll down for more photos

Exit mobile version