Site icon Kundapra.com ಕುಂದಾಪ್ರ ಡಾಟ್ ಕಾಂ

ಬದ್ರಿನಾಥ ದೇವಾಲಯಕ್ಕೆ ಪರ್ತಗಾಳಿ ಶ್ರೀ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾದಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಅವರ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಬದ್ರಿನಾಥದ ಶ್ರೀ ಬದ್ರಿನಾಥ ದೇವಾಲಯಕ್ಕೆ ಬುಧವಾರ ಸಂಜೆ ಭೇಟಿ ನೀಡಿದರು.

ದೇವಾಲಯಕ್ಕೆ ಭೇಟಿ ನೀಡಿದ ಗುರುವರ್ಯರು ಶ್ರೀದೇವರ ದರ್ಶನ ಪಡೆದು ದೇವಾಲಯದ ಪರಿಸರವನ್ನು ವೀಕ್ಷಿಸಿದರು. ಬಳಿಕ ಅಲಕಾನಂದ ಹಾಗೂ ಬ್ರಹ್ಮಕಪಾಲ ಪ್ರದೇಶಕ್ಕೆ ಭೇಟಿ ನೀಡಿದರು. ಹನುಮಂತ ಪುತ್ತು ಪೈ ಭಟ್ಕಳ, ಯು.ಗಣೇಶ ಮಲ್ಯ ದೆಹಲಿ, ಎಸ್.ಪ್ರಭಾಕರ ಕಾಮತ್ ಮಂಗಳೂರು, ಜಿ.ಎಸ್.ಕಾಮತ್ ಕುಮಟಾ, ಮಹೇಶ ಎಸ್.ನಾಯಕ್ ಯಲ್ಲಾಪುರ, ಡಾ.ಕಾಶೀನಾಥ ಪೈ ಗಂಗೊಳ್ಳಿ, ಯೋಗೇಶ್ ಜಿ.ಕಾಮತ್ ಕುಮಟಾ, ನಾರಾಯಣ ಪೈ ಮತ್ತಿತರರು ಶ್ರೀಗಳೊಂದಿಗೆ ಉಪಸ್ಥಿತರಿದ್ದರು.

Exit mobile version