Kundapra.com ಕುಂದಾಪ್ರ ಡಾಟ್ ಕಾಂ

ಅಕ್ಷತಾ ಸಾವು: ಎರಡನೇ ದಿನವೂ ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ

 

 

ಬೈಂದೂರು: ಅನುಮಾನಾಸ್ಪದವಾಗಿ ಸಾವಿಗೀಡಾದ ಬೈಂದೂರು ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಪ್ರಕರಣವನ್ನು ಶೀಘ್ರ ಬೇಧಿಸುವಂತೆ ಆಗ್ರಹಿಸಿ ಎರಡನೇ ದಿನವೂ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು. ಬೈಂದೂರಿನ ಗಾಂಧಿ ಮೈಧಾನದಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರ ವಿದ್ಯಾರ್ಥಿಗಳಿಗೆ ಮಕ್ಕಳ ಮಿತ್ರ ಮತ್ತು ಮಹಿಳಾ ಮಿತ್ರ ಸಂಘಟನೆ, ಕುಂದಾಪುರ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಎಬಿವಿಪಿ ಸಂಘಟನೆ, ಅಂಗನವಾಡಿ ಯೂನಿಯನ್, ವಿವಿಧ ಸ್ತ್ರೀಶಕ್ತಿ ಗುಂಪುಗಳು ಸಾಥ್ ನೀಡಿದವು.

ಬಳಿಕ ಮೆರವಣಿಗೆಯಲ್ಲಿ ಸಾಗಿ ಬೈಂದೂರು ವಿಶೇಷ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಲ್ಲಿಂದ ನೇರವಾಗಿ ಬೈಂದೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಅಕ್ಷತಾ ಮರಣೋತ್ತರ ವರದಿ ಹಾಗೂ ಆರೋಪಿಗಳ ಹೆಸರನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬರುವ ತನಕ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಾಗ ತನಿಕೆಯಲ್ಲಿದ್ದ ವರಿಷ್ಠಾಧಿಕಾರಿ ತನಿಕೆಯನ್ನು ಮೊಟಕುಗೊಳಿಸಿ ಠಾಣೆಗೆ ಆಗಮಿಸಿ, ವಿದ್ಯಾರ್ಥಿ ಮುಖಂಡರುಗಳೊಂದಿಗೆ ಸಮಾಲೋಚನೆ ನಡೆಸಿದರು.

ಮರಣೋತ್ತರ ವರದಿ ಒಂದು ದಿನದ ಒಳಗಾಗಿ ನಮ್ಮ ಕೈಸೇರಲಿದ್ದು, ನಮಗೆ ದೊರೆತ ತಕ್ಷಣ ಅದನ್ನು ಓದಿ ಹೇಳುವುದಾಗಿ ತಿಳಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ತನಿಕೆಯ ಒಳಪಡಿಸಿದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ಒಪ್ಪಲಿಲ್ಲ. ಪ್ರತಿಭಟನೆ ಮಾಡುವುದಕ್ಕೆ ಪ್ರಭಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ಪೊಲೀಸರು ಈ ಪ್ರಕರಣದಲ್ಲಿ ವಿಶೇಷ ಕಾಳಜಿ ವಹಿಸಿ ತನಿಕೆ ನಡೆಸುತ್ತಿರುವಾಗಿ ಪ್ರತಿಭಟಿಸಿ ತನಿಕೆಗೆ ಅಡ್ಡಿ ಉಂಟುಮಾಡುವುದು ಸಮಂಜಸವಲ್ಲ. ಇಲಾಖೆಯೊಂದಿಗೆ ಸಹಕರಿಸಿದರೆ ಅಪರಾಧಿಯನ್ನು ಶೀಘ್ರ ಬಂಧಿಸಲು ಸಾಧ್ಯವಾಗಲಿದೆ ಎಂದರು.

 

 

Exit mobile version