ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿ ಐ ಟಿ ಯು)ವಿನ ೪೩ನೇ ವಾರ್ಷಿಕ ಮಹಾಸಭೆಯು ಹಂಚು ಕಾರ್ಮಿಕರ ಭವನದಲ್ಲಿ ಕಾಮ್ರೇಡ್ ಕೆ.ಲಕ್ಷ್ಮಣರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. P
ರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿ ಐ ಟಿ ಯುವಿನ ಕರ್ನಾಟಕ ರಾಜ್ಯ ಸಮಿತಿಯ ಉಪಾಧ್ಯಕ್ಷ ಮತ್ತು ಕೆ.ಎಸ್.ಆರ್.ಟಿ.ಸಿ ಕಾರ್ಮಿಕ ಸಂಘದ ಕಾಮ್ರೇಡ್ ಕೆ ಪ್ರಕಾಶ ಚಾಲಕರನ್ನು ಉದ್ದೇಶಿಸಿ ಮಾತನಾಡಿತ್ತಾ ಕೇಂದ್ರ ಸರಕಾರದ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನಿತಿಯಿಂದ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಹಿಂದಿನ ಕೇಂದ್ರ ಸರಕಾರ ಜಾರಿಗೆ ತಂದಿರುವ ರಸ್ತೆ ಸಾರಿಗೆ ಸುರಕ್ಷ ಮಸುದೆ ಕಾಯ್ದೆಯನ್ನು ಇಂದು ಕೇಂದ್ರ ಸರಕಾರ ಇಂದು ಜಾರಿ ಮಾಡಿರುವುದರಿಂದ ಸಣ್ಣ ಸಣ್ಣ ತಪ್ಪುಗಳಿಗೆ ಅಧಿಕ ದಂಡ ನೀಡುವಂತಾಗಿದೆ. ಇರಿಂದಾಗಿ ಚಾಲಕರಿಗೆ ಹಿಂದಿಗಿಂತಲು ಈಗ ಕಷ್ಟಗಳು ಹೆಚ್ಚಾಗಿವೆ ಇನ್ನು ಕೆಲವು ಕಡೆ ಟ್ಯಾಕ್ಷಿಗಳಿಗೆ ಅಧಿಕ ಟೋಲ್‌ಗಳನ್ನು ವಸೂಲಿ ಮಾಡುತ್ತಿದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುವ ಟ್ಯಾಕ್ಷಿ ಚಾಲಕರು ತಮಗೆ ಸಿಗುವ ಕಡಿಮೆ ಬಾಡಿಗೆ ಹಣದಲ್ಲಿ ಟೋಲ್‌ಗಳಿಗೆ ಕಟ್ಟುವುದರಿಂದ ತಮ್ಮ ವಾಹನವನ್ನೇ ಮಾರಾಟ ಮಾಡುವಂತಾಗಿದೆ.ಇಂದು ಯಾವ ಚಾಲಕರಿಗು ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಕೇವಲ ಆಟೋ ಚಾಲಕರು ಖರೀದಿಸುವ ಪೆಟ್ರೋಲ್.ಡೀಸೆಲ್ ಇನ್ನಿತರ ಬಿಡಿಭಾಗಗಳಿಂದ ಸರಕಾರಕ್ಕೆ ದೊಡ್ಡ ಮಟ್ಟದ ತೆರಿಗೆಯನ್ನು ನೀಡುತ್ತಿದ್ದು ಅವರಿಗೆ ಅವರು ನೀಡುತ್ತಿರುವ ತೆರಿಗೆ ಹಣದಲ್ಲಿ ಪಿ.ಎಫ್ ಮತ್ತು ವರ್ಷ ದಾಟಿದ ನಂತರ ಪಿಂಚಣಿ ನೀಡಬೇಕು ಹಾಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಧನ ಸಹಾಯ, ಮದುವೆ ಧನ ಸಹಾಯ ನೀಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಇಂದು ಆಟೋ ಓಡಿಸುವ ಯಾವ ಚಾಲಕರು ತುಂಬಾ ಆಸೆ ಪಟ್ಟು ನಾನೊಬ್ಬ ರಿಕ್ಷಾ ಚಾಲಕನಾಗ ಬೇಕೆಂದು ಬಯಸಿ ಬಂದವರಲ್ಲಿ ಉದ್ಯೋಗದ ಕೊರತೆಯಿಂದಾಗಿ ಇವತ್ತು ಈ ವೃತ್ತಿಯನ್ನು ಆಯ್ಕೆ ಮಾಡಿ ಕಷ್ಟದ ಜೀವನ ಸಾಗಿಸಿತ್ತಿದ್ದಾರೆ. ಸ್ವಂತ ಮನೆಯಿಲ್ಲದೆ ಅದೆಷ್ಟೋ ಚಾಲಕರನ್ನು ನಾವು ನೋಡುತ್ತಾ ಇದ್ದೇವೆ ಚುನಾವಣೆ ಸಂದರ್ಭದಲ್ಲಿ ನಾವು ಆಯ್ಕೆ ಮಾಡಿ ಕಳಿಸಿರುವ ಜನ ಪ್ರತಿನಿಧಿಗಳು ಇಂದು ನಮ್ಮ ಪರವಾಗಿ ಸದನಗಳಲ್ಲಿ ಮಾತನಾಡುತ್ತಿಲ್ಲ ಈಗಿನ ಎಂ.ಪಿ, ಎಂ.ಎಲ್.ಎ ಗಳು ತಮ್ಮ ಸ್ವಾರ್ಥಕ್ಕಾಗಿ ಬದುಕುತ್ತಿದ್ದಾರೆ ಹಾಗಾಗಿ ನಾವು ನಮ್ಮೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ದೊಡ್ಡ ಮಟ್ಟದ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ಕಾಮ್ರೇಡ್ ವಿಠಲ್ ಪೂಜಾರಿಯವರು ಕೂಡಾ ಮುಖ್ಯ ಅತಿಥಿಯಾಗಿ ಚಾಲಕರ ಸ್ಥಿತಿ ಗತಿಗಳನ್ನು ಕುರಿತು ಮಾತನಾಡಿರು.
ವೇದಿಕೆಯಲ್ಲಿ ಸಮಘದ ಅಧ್ಯಕ್ಷರಾದ ಕೆ.ಲಕ್ಷ್ಮಣ ಬರೆಕಟ್ಟು, ಗೌರವಾಧ್ಯಕ್ಷರಾದ ಹೆಚ್ ಕರುಣಾಕರ, ಉಪಾಧ್ಯಕ್ಷರುಗಳಾದ ಗೋವಿಂದ ಗುಡಾರ ಹಕ್ಲು, ಎನ್ ಉಮೇಶ್, ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ೪೩ನೇ ವರದಿ ಮಂಡಿಸಿದರು. ಕೋಶಾಧಿಕಾರಿ ಸಂತೋಷ ಕಲ್ಲಾಗಾರ್ ಲೆಕ್ಕ ಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಕೃಷ್ಣಾ ದೇವಾಡಿಗ, ಶೇಖರ್ ವಿ, ಜನಾರ್ಧನ್ ಹಟ್ಟಿಯಂಗಡಿ,
ಸಂಘಟನಾ ಕಾರ್ಯದರ್ಶಿ ರಮೇಶ ವಿ, ಸಲಹೆಗಾರರಾದ ಚಂದ್ರ ವಿ, ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿ. ರವಿ ವಿ ಎಮ್ ಸ್ವಾಗತಿಸಿದರು. ರಾಜೇಶ್ ಪಡುಕೋಣೆ ಧನ್ಯವಾದ ನೀಡಿದರು.