ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬದುಕಿಗೂ, ಚೆಸ್ ಆಟಕ್ಕೂ ಸಾಮ್ಯತೆ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆಗಳನ್ನು ಇರಿಸುವ ಮೂಲಕ ಮಾತ್ರ ಯಶಸ್ಸು ಸಾಧಿಸಬಹುದು ಎನ್ನುವುದು ಚೆಸ್ ಕಲಿಸುವ ಪಾಠ. ವಿದ್ಯಾರ್ಥಿಗಳು ಬದುಕಿಗೆ ಅನ್ವಯವಾಗುವ ಚೆಸ್ ಆಟದ ನಿಯಮ ಮತ್ತು ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ತ್ರಾಸಿಯ ಡಾನ್ ಬೋಸ್ಕೊ ಶಾಲೆಯ ಆಡಳಿತಗಾರ ಫಾ. ಲಿಯೋ ಪಿರೇರಾ ಹೇಳಿದರು.
ಶಾಲೆಯಲ್ಲಿ ನಡೆದ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳ ಜಿಲ್ಲಾ ಮಟ್ಟದ ‘ಮಾಸ್ಟರ್ ಮೂವ್-2019’ ಚೆಸ್ ಪಂದ್ಯಾವಳಿ ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರತಿಪಾದಿಸಿದ ಅವರು ವಿದ್ಯಾರ್ಥಿಗಳು ಕ್ರೀಡೆಯ ಜತೆಗೆ ಪರಿಸರ ಸಂರಕ್ಷಣೆಯ ಚಾಂಪಿಯನ್‌ಗಳಾಗಬೇಕು ಎಂದು ಆಶಿಸಿದರು.
ಸಮಾರೋಪದ ನುಡಿಗಳನ್ನಾಡಿದ ಪ್ರಾಂಶುಪಾಲ ಫಾ. ಮ್ಯಾಕ್ಷಿಂ ಡಿಸೋಜ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೆರವಾದ ಎಲ್ಲರನ್ನು, ಮುಖ್ಯವಾಗಿ ಕುಂದಾಪುರದ ಕಶ್ವಿ ಚೆಸ್ ಸ್ಕೂಲ್‌ನ ಅಧಿಕಾರಿಗಳನ್ನು ಸ್ಮರಿಸಿದರು. ಪಂದ್ಯದ ಪ್ರಧಾನ ತೀರ್ಪುಗಾರ ಪ್ರಸನ್ನ ರಾವ್ ಮತ್ತು ಸಹಾಯಕ ತೀರ್ಪುಗಾರರನ್ನು ಗೌರವಿಸಲಾಯಿತು.
ಉಡುಪಿಯ ಸೇಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್‌ನ ನಿವೃತ್ತ ಪ್ರಾಂಶುಪಾಲೆ ಮರ್ಟಲ್ ಲೂಯಿಸ್, ಕುಂದಾಪುರದ ಕಶ್ವಿ ಚೆಸ್ ಸ್ಕೂಲ್‌ನ ಮುಖ್ಯಸ್ಥ ನರೇಶ್ ಬಿ ಮುಖ್ಯ ಅತಿಥಿಗಳಾಗಿದ್ದರು. ವಿಜೇತ ತಂಡಗಳಿಗೆ ಅತಿಥಿಗಳು ಪಾರಿತೋಷಕ ವಿತರಿಸಿದರು. ಉಪಪ್ರಾಂಶುಪಾಲ ಹಾಗೂ ಪಂದ್ಯದ ಸಂಚಾಲಕ ಮೆರ್ವಿನ್ ಫೆರ್ನಾಂಡೀಸ್, ರಕ್ಷಕ-ಶಿಕ್ಷಕ ಸಂಘದ ಪ್ರತಿನಿಧಿ ಶಾಲೆಟ್ ಲೋಬೊ ಇದ್ದರು
ಫಲಿತಾಂಶ : 14ರ ವಯೋಮಾನ ವಿಭಾಗ : ಪ್ರಥಮ-ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ; ದ್ವಿತೀಯ-ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ; ತೃತೀಯ-ಗುರುಕುಲ ಪಬ್ಲಿಕ್ ಸ್ಕೂಲ್, ಕೋಟೇಶ್ವರ.
17ರ ವಯೋಮಾನ ವಿಭಾಗ : ಪ್ರಥಮ-ಮಾಧವ ಕೃಪಾ ಶಾಲೆ, ಮಣಿಪಾಲ; ದ್ವಿತೀಯ-ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ; ತೃತೀಯ- -ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ