Kundapra.com ಕುಂದಾಪ್ರ ಡಾಟ್ ಕಾಂ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಇಕೋ ಕ್ಲಬ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವನಮಹೋತ್ಸವ ಕೇವಲ ಸಸಿ ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಿಸಿ ರಕ್ಷಿಸಬೇಕು, ಅವು ಬೆಳೆದ ನಂತರ ನಮ್ಮನ್ನು ರಕ್ಷಿಸುತ್ತವೆ. ಹಸಿರು ನಮ್ಮ ಜೀವನಾಡಿಯಾಗಬೇಕು. ಆಗ ಮಾತ್ರ ವಿಪತ್ತುಗಳಿಂದ ನಾವು ಮತ್ತು ಇಡೀ ಜೀವ ಸಂಕುಲ ಬದುಕಲು ಸಾಧ್ಯವಾಗುತ್ತದೆ ಬೈಂದೂರು ಉಪವಲಂii ಅರಣ್ಯಾಧಿಕಾರಿಗಳಾದ ಸದಾಶಿವ ಕೆ. ಅವರು ನುಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಇಲ್ಲಿನ ಇಕೋ ಕ್ಲಬ್, ಎನ್‌ಎಸ್‌ಎಸ್ ಹಾಗೂ ಬೈಂದೂರು ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಇಕೋ ಕ್ಲಬ್‌ನ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.

ಕಾಲೇಜಿನ ಇಕೋ ಕ್ಲಬ್ ಗಿಡಗಳನ್ನು ನೆಟ್ಟು ಬೆಳೆಸಿ, ಉಳಿಸುವುದರೋಂದಿಗೆ, ಯುವಜನರಲ್ಲಿ ಹಸಿರಿನ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಗಳು ಸಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ರಘು ನಾಯ್ಕ ನುಡಿದರು.

ಎನ್‌ಎಸ್‌ಎಸ್ ಯೋಜನಾಧಿಕಾರಿ ನಾಗರಾಜ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ವಿನೋದ್ ಬಸುಪಟ್ಟದ್, ಮೋಹನ್‌ಕುಮಾರ್, ಮೀನಾಕ್ಷಿ, ಶಿವಕುಮಾರ ಪಿ.ವಿ. ಮತ್ತು ಉಪವಲಯಾ ಅರಣ್ಯಾಧಿಕಾರಿಗಳಾದ ಗೋವಿಂದ ಪಟಗಾರ ಮತ್ತು ಅರಣ್ಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎನ್‌ಎಸ್‌ಎಸ್ ಯೋಜನಾಧಿಕಾರಿ ಲತಾ ಪೂಜಾರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ದೀಪಾ ದ್ವಿತೀಯ ಬಿಕಾಂ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಗೀತಾಂಜಲಿ ಸ್ವಾಗತಿಸಿದರು. ಇಕೋ ಕ್ಲಬ್‌ನ ಸಂಚಾಲಕರಾದ ಡಾ. ಅಶ್ವತ್ ಡಿ. ನಾಯ್ಕರವರು ವಂದಿಸಿದರು.

Exit mobile version