Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಾಯಿ ಗ್ರಾಮೀಣಾಭಿವೃಧ್ಧಿ ಟ್ರಸ್ಟ್‌ನಿಂದ ವೃದ್ದಾಶ್ರಮದಲ್ಲಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಶ್ರೀ ಸಾಯಿ ಗ್ರಾಮೀಣಾಭಿವೃಧ್ಧಿ ಟ್ರಸ್ಟ್ (ರಿ) ಮುಳ್ಳಿಕಟ್ಟೆ ಇವರ ವತಿಯಿಂದ ಸಮಾಜದಲ್ಲಿ ಅಬಾಲರು ಮತ್ತು ವೃದ್ದರು ಯೋಗಕ್ಷೇಮ ಕಾರ್ಯಕ್ರಮದಡಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹೊಲಿಕ್ರಾಸ್ ಕಾನ್ವೆಂಟ್ ವೃದ್ದಾಶ್ರಮ ತ್ರಾಸಿ ಇಲ್ಲಿನ ವಯೋವೃದ್ದರ ಜೊತೆಗೆ ಕೇಕ್ ತಿನ್ನಿಸಿ ಅವರ ಜೊತೆ ಸಣ್ಣ ಸಣ್ಣ ಆಟೋಟಗಳನ್ನು ಏರ್ಪಡಿಸಿ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಚೆರ್‌ಮನ್ ಭಾಸ್ಕರ ಬಿಲ್ಲವ ಕೇಕ್ ತಿನ್ನಿಸಿ ಉದ್ಘಾಟಿಸಿದರು. ಮುಖ್ಯ ಅಥಿತಿಯಾಗಿ ಬೇಬಿ ಕೊಠಾರಿ ಕೆರ್ಗಾಲ್, ಹರೀಶ ಖಾರ್ವಿ ಉಪ್ಪುಂದ, ಕಾನ್ವೆಂಟ್‌ನ ಸಿಸ್ಟರ‍್ಸ್ ಮತ್ತು ವಿವಿಧ ಸ್ವ.ಸಹಾಯ ಸಂಘದ ಪದಾಧಿಕಾರಿಗಳಾದ ನಾಗರತ್ನ ಹೆಮ್ಮಾಡಿ, ಲಕ್ಷ್ಮಿ ಕಟ್‌ಬೇಲ್ತೂರು, ಪವಿತ್ರಾ, ಶೋಭಾ, ಸುಷನ್ಯ, ಸುವೀಷ ಕುಮಾರ, ಧನ್ಯ, ಮತ್ತು ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘದ ಸಿಬ್ಬಂದಿಗಳಾದ ರೇಖಾ, ಸಂತೋಷ ಮತ್ತು ಪ್ರತಿಭಾ ಉಪಸ್ಥಿತರಿದ್ದರು.

Exit mobile version