Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಗೆಲುವಿನ ಸರದಾರ ಹಾಲಾಡಿಗೆ ಒಲಿಯದ ಮಂತ್ರಿಗಿರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿಯೂ ಮಂತ್ರಿಗಿರಿಯ ಅವಕಾಶ ಕೈತಪ್ಪಿದ್ದು, ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಐದನೇ ಭಾರಿಗೆ ಕುಂದಾಪುರದ ಶಾಸಕರಾಗಿ ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಿದ್ದ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿ ಮಂತ್ರಿ ಪದವಿ ಸಿಗಬಹುದೆಂದು ಹಲವರು ನಿರೀಕ್ಷಿಸಿದ್ದರು. ಆದರೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಜೆಪಿಯ ಗೆಲುವಿನ ಪತಾಕೆ ಹಾರಿಸಿದ್ದರೂ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಓರ್ವರನ್ನು ಮಾತ್ರ ಮಂತ್ರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಶೆಟ್ಟರ್ ಸಂಪುಟದಲ್ಲಿಯೂ ಕೈತಪ್ಪಿತ್ತು:
2012ರಲ್ಲಿ ಸಿಎಂ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕೊನೆಯ ಕ್ಷಣದಲ್ಲಿ ಮಂತ್ರಿಗಿರಿ ಕೈತಪ್ಪಿತ್ತು. ಇದು ಹಾಲಾಡಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿ ಪ್ರತಿಭಟನೆಗಳು ನಡೆದಿದ್ದವು, ಮಂದೆ ಹಾಲಾಡಿಯವರೇ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷೇತರರಾಗಿ ಸ್ವಧರ್ಿಸಿ ಅತ್ಯಧಿಕ ಬಹುಮತದಿಂದಲೇ ಗೆದ್ದು ಬಂದಿದ್ದರು.,

ಗೆಲುವಿನ ಸರದಾರ:
ಹಾಲಾಡಿ ಶ್ರೀನಿವಾಸ ಶೆಟ್ಟಿಯವರು 1999, 2004, 2008,, 20013 ಹಾಗೂ 20018ರಲ್ಲಿ ಸತತವಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಪಕ್ಷೇತರರಾಗಿ ಸ್ವಧರ್ಿಸಿದ್ದಾಗಲೂ ಕುಂದಾಪುರದ ಜನತೆ ಅವರ ಕೈಬಿಟ್ಟಿರಲಿಲ್ಲ. 2018ರಲ್ಲಿ ಬಿಜೆಪಿಯೊಂದಿಗಿನ ಮುನಿಸಿ ದೂರ ಮಾಡಿಕೊಂಡು ಮರಳಿ ಪಕ್ಷ ಸೇರಿದ್ದರು.

Exit mobile version