Kundapra.com ಕುಂದಾಪ್ರ ಡಾಟ್ ಕಾಂ

ಡಿಡಿಯುಕೆ-ಜಿಕೆವೈನಲ್ಲಿ ಉದ್ಯೋಗಾಧಾರಿತ ಕೋರ್ಸ್‌ಗೆ ನೊಂದಣಿ ಆರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU –GKY) ಅಡಿಯಲ್ಲಿ ಗ್ರಾಮಿಣ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ ಹಾಗೂ ಉದ್ಯೋಗವಕಾಶ / ಸ್ವ-ಉದ್ಯೋಗವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ನೈಪುಣ್ಯ ಇಂಟರ‍್ನ್ಯಾಷನಲ್ ಸಂಸ್ಥೆಯ ಮೂಲಕ ವಿವಿಧ ಕೋರ್ಸುಗಳ ನೊಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ 18 ರಿಂದ 35 ವರ್ಷದ ವರೆಗಿನ ನಿರುದ್ಯೋಗಿ ಯುವಕ ಯುವತಿಯರ ಉಚಿತ ಉದ್ಯೋಗಾಧಾರಿತ ಕೋರ್ಸುಗಳಿಗೆ ನೊಂದಣಿ ಮಾಡಿಕೊಂಡು ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾಗಿ ಪ್ರವೇಶಾತಿ ಪಡೆಯಬಹುದಾಗಿದೆ.

ಪ್ರಸಕ್ತ ಸಾಲಿನಲ್ಲಿ ಅಕೌಂಟ್ ಅಸಿಸ್ಟೆಂಟ್, ಟು-ವೀಲರ್ ಡೆಲಿವರಿ ಅಸೋಸಿಯೇಟ್ ಹಾಗೂ ರಿಟೇಲ್ ಕೋರ್ಸುಗಳಿಗೆ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ. ಪ್ರವೇಶ ಪಡೆಯುವ ಪ್ರತಿ ಅಭ್ಯರ್ಥಿಗೂ ದಿನದ ಭತ್ಯೆ ನೀಡುವುದರೊಂದಿಗೆ ಟ್ಯಾಬ್ಲೆಟ್, ಕಲಿಕಾ ಸಾಮಾಗ್ರಿ, ಊಟ, ವಸತಿ, ಸಮವಸ್ತ್ರ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ತನಕದ ಪೂರ್ಣಕಾಲಿಕ ತರಬೇತಿಯನ್ನು ನುರಿತ ಉಪನ್ಯಾಸಕರಿಗೆ ನೀಡುವುದಲ್ಲಿದೇ ತರಬೇತಿ ಪೂರ್ಣಗೊಂಡ ಬಳಿಕ ಕೇಂದ್ರ ಸರಕಾರದ ಪ್ರಮಾಣ ಪತ್ರ ಹಾಗೂ ಆಯ್ದ ಕಂಪೆನಿಗಳಲ್ಲಿ ಉದ್ಯೋಗದ ಭರವಸೆಯನ್ನು ನೀಡಲಾಗುತ್ತದೆ.

ತರಬೇತಿ ಸೇರಬಯಸುವ ವಿದ್ಯಾರ್ಥಿಗಳು ಅಂಕಪಟ್ಟಿ ಅಥವಾ ವರ್ಗಾವಣಾ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ರೇಷನ್ ಕಾಡ್, ಆಧಾರ್ ಕಾರ್ಡ್, ಇತ್ತಿಚಿನ ಆರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಹಾಗೂ ಭಾವಚಿತ್ರವಿರುವ ಬ್ಯಾಂಕ್ ಪಾಸ್‌ಬುಕ್ ನೊಂದಿಗೆ ದಾಖಲಾಯಿ ಮಾಡಿಕೊಳ್ಳಬಹುದಾಗಿದೆ. ಮಾಹಿತಿಗಾಗಿ ಭಾಸ್ಕರ ಬಿಲ್ಲವ. ನೈಪುಣ್ಯ ಇಂಟರ‍್ನ್ಯಾಷನಲ್ ಬೈಂದೂರು, ಮೂಕಾಂಬಿಕಾ ಕಾಂಪ್ಲೆಕ್ಸ್, ಬೈಂದೂರು ಪದವಿ ಪೂರ್ವ ಕಾಲೇಜಿನ ಹತ್ತಿರ, ಬೈಂದೂರು ಮೊ. 9743321233, 9845680009 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ಕೋರಿದೆ.

 

Exit mobile version