Kundapra.com ಕುಂದಾಪ್ರ ಡಾಟ್ ಕಾಂ

ಸ್ವೇಝೋನ್ ಚಾಕಲೇಟ್ ಉತ್ಪಾದನಾ ಘಟಕ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮುಂಬೈ: ಸಾಯಿ ಲೀಲಾ ಕ್ಯಾಟರರ‍್ಸ್‌ನ ಹೊಸ ಉತ್ಪನ್ನ ಸ್ವೇಝೋನ್ ಚಾಕಲೇಟ್‌ ಉತ್ಪಾದನಾ ಘಟಕವು ಇಲ್ಲಿನ ಪೂರ್ವ ಅಂಧೇರಿ ಸಕಿವಿಹಾರ್ ರಸ್ತೆಯ ಅನ್ಸಾ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಲೋಕಾರ್ಪಣೆಗೊಂಡಿತು.

ನೂತನ ಉತ್ಪನ್ನದ ಕಛೇರಿಯನ್ನು ಉದ್ಯಮಿ ಸುಧಾಕರ ಕಸ್ತೂರಿ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಸಾಯಿ ಕೇರ್ ಲಾಜಿಸ್ಟಿಕ್ಸ್‌ನ ಸುರೇಂದ್ರ ಪೂಜಾರಿ, ಸಾನ್ವಿ ಸ್ಟಾರ್ ಹಾಸ್ಪಿಟಾಲಿಟಿಯ ಸಂತೋಷ್ ಶೆಟ್ಟಿ, ಗೋವಾ ರಚನಾ ಗ್ರಾಫಿಕ್ಸ್‌ನ ಸಂಜಯ್ ಉಪಾಧ್ಯ, ಯಶವಂತ್ ಪೂಜಾರಿ, ಮಹಾಬಲ ದೇವಾಡಿಗ, ಜಯರಾಮ್ ಕೆ. ಪೂಜಾರಿ, ಹರೀಶ್ ಮೆಂಡನ್, ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಾಯಿ ಲೀಲಾ ಕ್ಯಾಟರರ‍್ಸ್‌ನ ನಿರ್ದೇಶಕ, ಬೈಂದೂರು ಮೂಲದ ಮಂಜುನಾಥ ಕೆ. ಪೂಜಾರಿ ಅವರು ಸರ್ವರನ್ನು ಸ್ವಾಗತಿಸಿಕೊಂಡರು.

 

Exit mobile version