Site icon Kundapra.com ಕುಂದಾಪ್ರ ಡಾಟ್ ಕಾಂ

ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಲಿದ್ದೇನೆ: ಶ್ರೀಶಾಂತ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಸಿಸಿಐ ವಿಧಿಸಿರುವ ನಿರ್ಬಂಧ ಶೀಘ್ರವೇ ತೆರವುಗೊಳಿಸಲಿದ್ದು ಬಳಿಕ ಕ್ರಿಕೆಟ್‌ಗೆ ವಾಪಾಸಾಗಲಿದ್ದೇನೆ ಎಂದು ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್ ಹೇಳಿದರು.

ಅವರು ಬೈಂದೂರು ರುಪೀ ಮಾಲ್ ಉದ್ಘಾಟನೆಯ ಬಳಿಕ ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಂದಾಪ್ರ ಡಾಟ್ ಕಾಂ ಪ್ರಶ್ನೆಗೆ ಉತ್ತರಿಸಿದ ಪ್ರತಿಕ್ರಿಯಿಸಿದ ಆರು ವರ್ಷಗಳಿಂದ ಬದುಕಿನ ಭಾಗವಾಗಿದ್ದ ಕ್ರಿಕೆಟ್‌ನಿಂದ ದೂರವಿದ್ದೇನೆ. ಆದರೆ ಮತ್ತೆ ಕ್ರಿಕೆಟ್ ಆಟಲಿರುವ ಬಗ್ಗೆ ಸಂತಸವಿದೆ. 2012ರಲ್ಲಿ ಕೇರಳ ರಣಜಿ ಮತ್ತು ಅನ್ಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲಿದ್ದು ಫೆಬ್ರವರಿಯಿಂದಲೇ ಪ್ರಾಕ್ಟಿಸ್‌ನಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದರು.

ಕನ್ನಡ ಚಿತ್ರರಂಗದಲ್ಲಿ ನಟಸುತ್ತಿರುವ ಬಗ್ಗೆ ಮಾತನಾಡಿ ಕೆಂಪೆಗೌಡ -2 ಚಿತ್ರ ನನಗೆ ಚಿತ್ರರಂಗದಲ್ಲಿ ಬದ್ರ ತಳಪಾಯ ಹಾಕಿಕೊಟ್ಟಿದೆ. ಈಗ ಧೂಮ್ ಅಗೇನ್ ಚಿತ್ರದಲ್ಲಿ ನಡೆಸುತ್ತಿದ್ದೇನೆ. ಇನ್ನು ಕೆಲವು ಸಿನೆಮಾಗಳಲ್ಲಿ ನಟಿಸಲು ಆಹ್ವಾನ ಬಂದಿದೆ. ಬೆಂಗಳೂರು ಈಗ ನನ್ನ ಎರಡನೇ ಮನೆಯಾಗಿದೆ. ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದೇನೆ ಎಂದರು.

ರಾಜಕೀಯದಲ್ಲಿ ಆಸಕ್ತರಾಗಿದ್ದೀರಲ್ಲ ಎಂಬ ಕುಂದಾಪ್ರ ಡಾಟ್ ಕಾಂ ಪ್ರಶ್ನೆಗೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಒಂದು ಜವಾಬ್ದಾರಿ. ಯುವಕರು ಹೆಚ್ಚೆಚ್ಚು ರಾಜಕೀಯ ಮಾರ್ಗದಲ್ಲಿ ಮುನ್ನಡೆದು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಎಂದ ಅವರು ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ವರ್ಧಿಸುವ ಇಂಗಿತವನ್ನು ವ್ಯಕ್ತಿಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಿಸ್ ಸೌತ್ ಇಂಡಿಯಾ 2019 ನಿಕಿತಾ ಥೋಮಸ್, ಆರ್. ಎಸ್. ವೆಂಚರ್ಸ್ ಪ್ರವರ್ತಕ ರಾಜೀವ ಕುಮಾರ್, ಪಾಲುದಾರರಾದ ಕೆ. ವೆಂಕಟೇಶ್ ಕಿಣಿ, ಸಾಜು ಇದ್ದರು.

Exit mobile version