Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರಿಗೆ ಕ್ರಿಕೆಟಿಗ ಶ್ರೀಶಾಂತ್ ದಂಪತಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕ್ರಿಕೆಟಿಗ ಹಾಗೂ ನಟ ಶ್ರೀಶಾಂತ್ ಅವರು ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನಕ್ಕೆ ಪತ್ನಿ ಭುವನೇಶ್ವರಿ ಕುಮಾರಿ ಅವರೊಂದಿಗೆ ಭೇಟಿ ನೀಡಿದ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ರಮೇಶ್ ಗಾಣಿಗ ಗೌರವಿಸಿದರು. ಈ ಸಂದರ್ಭ ಆರ್. ಎಸ್. ವೆಂಚರ್ಸ್ ಪ್ರವರ್ತಕ ರಾಜೀವ ಕುಮಾರ್, ಪಾಲುದಾರರಾದ ಕೆ. ವೆಂಕಟೇಶ್ ಕಿಣಿ, ಸಾಜು ಇದ್ದರು.

Exit mobile version