Site icon Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಗೆ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಡಿಯಲ್ ಪ್ಲೆ. ಅಬಾಕಸ್ ಇಂಡಿಯಾ ಪ್ರೈ.ಲಿ. ವತಿಯಿಂದ ಮೈಸೂರಿನಲ್ಲಿ ನಡೆದ 14ನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬೈಂದೂರು ಸೆಂಟರ್ ಅಬಾಕಸ್ ವಿದ್ಯಾರ್ಥಿಗಳು ವಿಜೇತರಾಗಿ ತಮಿಳುನಾಡಿನ ಚನೈನಲ್ಲಿ ನಡೆಯುವ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಯಜ್ಞ ಯು ಹೆಗ್ಡೆ ಪ್ರಥಮ ಸ್ಥಾನ, ಸಾನಿಧ್ಯ ಮಯ್ಯ ಹಾಗೂ ಅನುರಾಗ ಪಟಗಾರ ದ್ವಿತೀಯ ಸ್ಥಾನ, ಪ್ರಥ್ವಿ ಶ್ಯಾನುಭಾಗ, ಧಾನ್ವಿ, ಸಾತ್ವಿಕ ಮಯ್ಯ, ಭಾರ್ಗವ ನಾಯಕ್ ತೃತೀಯ ಸ್ಥಾನ ಹಾಗೂ ಶಮನ, ಅಮಯ ಕೆ. ಶೆಟ್ಟಿ, ದಿವ್ಯಾ ಭಟ್, ವಂದಿತಾ ಭಟ್, ಇಶಾನ್ ಪ್ರೇಕ್ಷಾ, ಪ್ರತೀತ್, ಶರಣ್, ರಿತೀಕಾ ಪ್ರಭು ಇತರೆ ಬಹುಮಾನವನ್ನು ಪಡೆದುಕೊಂಡರು. ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ರಾಜ್ಯದ ಹಲವು ಕಡೆಯಿಂದ ಸುಮಾರು ೧೫೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳನ್ನು ಬೈಂದೂರು ಅಬಾಕಸ್ ವತಿಯಿಂದ ಅಭಿನಂದಿಸಲಾಯಿತು.

Exit mobile version