Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಾಷ್ಟ್ರೀಯ ಯುವ ಕೌಶಲ್ಯ ಅಭಿವೃದ್ಧಿ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೊಡಪಾಡಿ ಸ. ಕಿ. ಪ್ರಾಥಮಿಕ ಶಾಲೆಯಲ್ಲಿ ನೆಹರು ಯುವ ಕೇಂದ್ರ ಉಡುಪಿ ಮತ್ತು ತಾಯಿ ಮಾರಿಕಾಂಬ ಮಹಿಳಾ ಮಂಡಳಿ ಕೊಡಪಾಡಿ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ಕೌಶಲ್ಯ ಅಭಿವೃದ್ಧಿ ದಿನಾಚರಣೆ ಹಾಗೂ ರಾಷ್ಟ್ರೀಯ ಭಾಷೆ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರುಡ್‌ಸೆಡ್ ಸಂಸ್ಥೆಯ ಉಪನ್ಯಾಸಕ ಸಂತೋಷ ಹಾಗೂ ರಾಷ್ಟ್ರೀಯ ಭಾಷೆ ಹಿಂದಿ ದಿನಾಚರಣೆಯ ಕುರಿತು ಸೈಂಟ್ ಮೇರಿಸ ಶಾಲೆಯ ಶಿಕ್ಷಕ ಭಾಸ್ಕರ ಗಾಣಿಗ ಉಪನ್ಯಾಸ ನೀಡಿದರು.

ಮಾರಿಕಾಂಬ ಮಹಿಳಾ ಮಂಡಳಿ ಅಧ್ಯಕ್ಷರು ಹಾಗೂ ಮಾರಿಕಾಂಬ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ನೆಹರು ಯವ ಕೇಂದ್ರದ ಪ್ರಶಾಂತ ಇದ್ದರು.

ದೇವಕಿ ಸ್ವಾಗತಿಸಿ, ಸುನೀತಾ ಗಾಣಿಗ ವಂದಿಸಿದರು. ಸುಶ್ಮಿತ ಪ್ರಾರ್ಥಿಸಿದರು.

Exit mobile version