Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು, ಕಂಡ್ಲೂರು, ಅಮಾಸೆಬೈಲು ಪಿಎಸೈಗಳ ವರ್ಗಾವಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ಪೊಲೀಸ್ ಠಾಣೆಯ ಪಿಎಸೈ ತಿಮ್ಮೇಶ್ ಬಿ. ಎನ್., ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಧರ್ ನಾಯ್ಕ್, ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸೈ ಸುದರ್ಶನ್ ಅವರನ್ನು ವರ್ಗಾವಣೆ ಮಾಡಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯ ಪಿಎಸೈ ತಿಮ್ಮೇಶ್ ಬಿ. ಎನ್ ಅವರನ್ನು ಕಾರ್ಕಳ ನಗರ ಠಾಣೆಗೆ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸೈ ಶ್ರೀಧರ್ ನಾಯ್ಕ್ ಅವರನ್ನು ಶಂಕರನಾರಾಯಣ ಪೊಲೀಸ್ ಠಾಣೆಗೆ, ಅಮಾಸೆಬೈಲು ಪೊಲೀಸ್ ಠಾಣೆಯ ಎಸೈ ಸುದರ್ಶನ್ ಬಿ. ಎಸ್ ಅವರನ್ನು ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಲ್ಪೆ ಠಾಣೆಯ ಮಧು ಬಿ. ಇ ಅವರನ್ನು ಬೈಂದೂರು ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಪಶ್ಚಿಮ ವಲಯ ಪೊಲೀಸ್ ಸಿಬ್ಬಂಧಿ ಮಂಡಳಿಯ ನಡಾವಳಿಯ ಸರ್ವಾನುಮತದ ನಿರ್ಣಯದಂತೆ ಚಿಕ್ಕಮಗಳೂರು, ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಟ್ಟು ೪೭ ಮಂದಿ ಪಿಎಸ್‌ಐಗಳನ್ನು ವರ್ಗಾವಣೆ ಮಾಡಲಾಗಿದೆ.

 

Exit mobile version