Kundapra.com ಕುಂದಾಪ್ರ ಡಾಟ್ ಕಾಂ

ಉತ್ತಮ ಜೀವನದ ಪಧ್ಧತಿಗಳನ್ನು ರೂಢಿಸಿಕೊಳ್ಳುವುದೇ ಯೋಗ

ಕುಂದಾಪುರ: ದೈಹಿಕ ಆಸನ ಮತ್ತು ವ್ಯಾಯಾಮಗಳಿಗಿಂತ ಮುಂದುವರಿದು ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ಬದುಕಿನಲ್ಲಿ ದೈರ್ಯ ಮತ್ತು ಸ್ಥೆರ್ಯವನ್ನು ತುಂಬಿಸಿ ಉತ್ತಮ ಜೀವನ ಪಧ್ಧತಿಯನ್ನು ರೂಡಿಸಿಕೊಳ್ಳುವುದೇ ಯೋಗ ಎಂದು ನಂದ ಗೋಕುಲ ಶಿಶುಮಂದಿರದ ಆಡಳಿತ ನಿರ್ದೇಶಕ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಹೇಳಿದರು.

ಅವರು ಹುಣ್ಸೆಮಕ್ಕಿ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿಚಾರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಹಿರಿಯ ಯೋಗ ಸಾಧಕ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೋಗ ತರಬೇತಿ ಶಿಬಿರವನ್ನು ಯೋಗ ಸಾಧಕ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ರತ್ನಾಕರ್ ಶೆಟ್ಟಿ ಉಧ್ಘಾಟಿಸಿ, ಯೋಗವನ್ನು ನಮ್ಮ ದಿನ ನಿತ್ಯ ಜೀವನದಲ್ಲಿ ಅನುಸಂಧಾನ ಮಾಡಿಕೊಂಡಲ್ಲಿ ರೋಗ ಮುಕ್ತರಾಗಿ ಸದೃಢ ಸಮಾಜ ನಿರ್ಮಾಣಗೊಂಡು ಸತ್ಯ ಧರ್ಮದ ಪಾಲನೆಯಾಗುತ್ತದೆ ಎಂದರು. ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಸೂರಪ್ಪ ಶೆಟ್ಟಿ ಇದ್ದರು. ಶಿಕ್ಷಕ ನಾರಾಯಣ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹೆಮ್ಮಾಡಿ ಜನತಾ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಯೋಗ ಸಾಧಕ ಶ್ರೀನಿವಾಸ ಪ್ರಭು ಮತ್ತು ಸದಾನಂದ ಶಾನುಬಾಗ್ ಯೋಗ, ಪ್ರಾಣಾಯಮ ಮತ್ತು ಧ್ಯಾನದ ಕ್ರಿಯೆಗಳ ಬಗ್ಗೆ ತರಬೇತಿ ನೀಡಿದರು.

Exit mobile version