ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎನ್‌ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್, ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ರಾಜ್ಯಮಟ್ಟದ ಉತ್ತಮ ಎನ್‌ಸಿಸಿ ಕೆಡೆಟ್- ಚಿನ್ನದ ಪದಕವನ್ನು ಪಡೆದಿರುತ್ತಾರೆ.
ದೆಹಲಿಯಲ್ಲಿ 2020ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರದ ಹಿರಿಯ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ.
ಮೂಡುಬಿದಿರೆಯಲ್ಲಿ ನಡೆದ ಮೂರು ಹಂತದ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಈಕೆ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಈಕೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಎನ್‌ಸಿಸಿ ಅಧಿಕಾರಿ ಕ್ಯಾ.ಡಾ.ರಾಜೇಶ್ ಆಭಿನಂದಿಸಿದ್ದಾರೆ.
ಕುಂದಾಪುರ ತಾಲೂಕು ಗಂಗೊಳ್ಳಿಯವರಾದ ವೈಷ್ಣವಿ ಗೋಪಾಲ್ ಅವರು ಕಲಾವಿದ ಗೋಪಾಲ ಚಂದನ್ ಹಾಗೂ ವೈದ್ಯೆ ಡಾ. ವೀಣಾ ಕಾರಂತ್ ಅವರ ಪುತ್ರಿ.