Kundapra.com ಕುಂದಾಪ್ರ ಡಾಟ್ ಕಾಂ

ರತ್ನಾ ಕೊಠಾರಿ ಪ್ರಕರಣ: ಐಜಿಪಿ ಅಮೃತ್‌ಪಾಲ್ ಹೇಳಿಕೆಗೆ ಡಿವೈಎಫ್‌ಐ ಖಂಡನೆ

ಕುಂದಾಪುರ: ಶಿರೂರು ವಿದ್ಯಾರ್ಥಿ ರತ್ನಾ ಕೊಠಾರಿ ಪ್ರಕರಣದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ರತ್ನಾ ಕೊಠಾರಿಯ ಸಾವು ಸಹಜ ಸಾವು ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕುಂದಾಪುರ ತಾಲೂಕು ಸಮಿತಿಯು ಖಂಡಿಸುತ್ತದೆ.

ಒಬ್ಬ ಜವಾಬ್ದಾರಿಯುತ ಪೋಲೀಸ್ ಅಧಿಕಾರಿಯು ಮಾಡುವಂತಹ ಕೆಲಸವಲ್ಲ. ಒಂದು ವೇಳೆ ರತ್ನಾ ಕೊಠಾರಿಯ ಸಾವು ಸಹಜ ಸಾವಾದರೂ ಕೂಡಾ ಇಷ್ಟರವರೆಗೆ ಯಾಕೆ ಅದನ್ನು ಬಹಿರಂಗವಾಗಿ ಹೇಳಲಿಲ್ಲ. ಇಡೀ ರಾಜ್ಯ ಜಿಲ್ಲೆಯಲ್ಲಿ ಪ್ರತಿಭಟನೆಗಳು ಗಮನ ಸೆಳೆದರು ಕೂಡಾ ವ್ಯಾಪಾಕ ಪ್ರತಿಭಟನೆಗಳಿಗೆ ಕಾರಣವಾದ ಪ್ರಕರಣವನ್ನು ನೀವು ಇಷ್ಟು ದಿನ ಮುಚ್ಚಿಟ್ಟು ಕೊನೆಗೆ ಅಕ್ಷತಾ ಕೊಲೆಯಾದಾಗ ರತ್ನಾ ಕೊಠಾರಿಯ ಸಾವು ಸಹಜ ಸಾವು ಎಂದು ಹೇಳಿಕೆ ನೀಡಿರುವುದು ಒಂದು ಬೇಜವಾಬ್ದಾರಿಯುತ ಹೇಳಿಕೆಯಾಗಿದೆ.

ಈ ಹಿಂದೆ ಪೋಲೀಸ್ ಅಧಿಕಾರಿಯವರನ್ನು ಭೇಟಿ ಮಾಡಲು ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ನಿಯೋಗ ಹೋದಾಗಲೂ ಕೂಡಾ ಸರಿಯಾದ ಮಾಹಿತಿಯನ್ನು ನೀಡದೇ ಜೇನು ಕಚ್ಚಿ ಸತ್ತಿರಬಹುದು ಮತ್ತು ಮಾತ್ರೆ ಸೇವನೆಯಿಂದ ಸತ್ತಿರಬಹುದು ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿರುತ್ತಾರೆ. ಇದನ್ನೆಲ್ಲಾ ನೋಡಿದರೆ ಈ ಪ್ರಕರಣವು ಎತ್ತ ಕಡೆ ಸಾಗುತ್ತಿದೆ ಎನ್ನುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ರತ್ನಾ ಕೊಠಾರಿ ಪ್ರಕರಣವನ್ನು ಶೀಘ್ರವೇ ಬೇಧಿಸಿ ಮೃತಳ ಕುಟುಂಬಕ್ಕೆ ಶಾಸಕರು ಘೋಷಿಸಿದ ಮೂರು ಲಕ್ಷ ರೂಪಾಯಿ ಪರಿಹಾರವನ್ನು ಕೂಡಲೇ ವಿತರಿಸದಿದ್ದಲ್ಲಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಸಂಘಟನೆ ಮುಂದಿನ ಹೋರಾಟಕ್ಕೆ ಸಜ್ಜಾಗುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version