ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೀಪದ ಕಾಲ್ತೋಡು ಗ್ರಾಮದ ಚಪ್ಪರಿಕೆ ಪಾಯಪ್ಪ ಶೆಟ್ಟಿ(80) ಕೆಲಕಾಲದ ಅಸ್ವಾಸ್ಥ್ಯದ ಕಾರಣ ಬೆಂಗಳೂರಿನ ಮಗನ ಮನೆಯಲ್ಲಿ ಸೋಮವಾರ ನಿಧನರಾದರು.
ನಾಗೂರಿನಲ್ಲಿ ದೀರ್ಘಕಾಲ ಹೋಟೆಲ್ ಉದ್ಯಮ ನಡೆಸಿ ಜನಾನುರಾಗಿ ಆಗಿದ್ದ ಅವರು 30ವರ್ಷ ಚಪ್ಪರಿಕೆಯ ಹೊಸಾಡು ಎಂಬಲ್ಲಿನ ಶ್ರೀ ನಂದಿಕೇಶ್ವರ ದೈವಸ್ಥಾನದ ನೇತೃತ್ವ ವಹಿಸಿ, ಅದರ ಜೀರ್ಣೋದ್ಧಾರ ನಡೆಸಿದ್ದರು.
ಅವರು ಪತ್ನಿ, ಖ್ಯಾತ ಪತ್ರಕರ್ತ ಹಾಗೂ ಲೇಖಕ ಆಗಿರುವ ಪುತ್ರ ಸತೀಶ ಚಪ್ಪರಿಕೆ ಅವರನ್ನು ಅಗಲಿದ್ದಾರೆ. ಪಾಯಪ್ಪ ಶೆಟ್ಟಿ ಅವರ ಅಪೇಕ್ಷೆಯಂತೆ ದೇಹವನ್ನು ಶಿಕ್ಷಣ ಹಾಗೂ ಸಂಶೋಧನೆಗೆ ಬಳಸಿಕೊಳ್ಳಲು ಬೆಂಗಳೂರು ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಯಿತು.